Showing posts with label ಇಂದು ನೋಡಿದೆ ಗೋವಿಂದನಾ ಸರ್ವ ankita vijaya vittala INDU NODIDE GOVINDANA SARVA SUNDARASAARA. Show all posts
Showing posts with label ಇಂದು ನೋಡಿದೆ ಗೋವಿಂದನಾ ಸರ್ವ ankita vijaya vittala INDU NODIDE GOVINDANA SARVA SUNDARASAARA. Show all posts

Wednesday, 8 December 2021

ಇಂದು ನೋಡಿದೆ ಗೋವಿಂದನಾ ಸರ್ವ ankita vijaya vittala INDU NODIDE GOVINDANA SARVA SUNDARASAARA



ವಿಜಯದಾಸ
ಇಂದು ನೋಡಿದೆ ಗೋವಿಂದನಾ ಸರ್ವ
ಸುಂದರಸಾರ ವೆಂಕಟ ರಮಣನಾ ಪ

ಭಾಗೀರಥಿಯ ಪೆತ್ತವನಾ ಭವ
ರೋಗವ ಕಳೆವ ರಾಜೀವನೇತ್ರನಾ
ಸಾಗರದೊಳಗೆ ಒಪ್ಪುವನಾ ಭಕ್ತ
ಕೂಗಲು ನಿಲ್ಲದೆ ಒದಗಿ ಬರುವನಾ1

ನಿಲ್ಲದೆಳಿಪಿಗೆ ಪೊಳೆದನಾ ಗೋ
ಪಾಲಕರಿಗೆ ವೈಕುಂಠ ತೋರಿದನಾ
ನೀಲಾದೇವಿಗೆ ಬಲಿದವನಾ ಭೂ
ಪಾಲಗೆ ಮೆಚ್ಚಿ ಸತ್ವರವನಿತ್ತವನಾ2

ವಿಶ್ವ ಮಂಗಳದಾಯಕನಾ ಅಹಿ
ವಿಷ್ಟಕಸೇನರಿಂದ ಪೂಜೆಗೊಂಬುವನಾ
ವಿಶ್ವರೂಪ ವಿಲಕ್ಷಣನಾ ಸರ್ವ
ವಿಶ್ವ ಪರಿಪಾಲ ಪ್ರಣತಾರ್ತಿ ಹÀರನ3

ಸುರ ಶಿರೋಮಣಿ ಸದ್ಗುಣನಾ ಸು
ದರಶನ ಶಂಖ ಭಜಕರಿಗೆ ಕೊಟ್ಟವನಾ
ನಿರುತ ಆನಂದ ಭರಿತನಾ ದಿವ್ಯ
ಮಿರುಗುವಾಭರಣದಿಂದಲಿ ನಿಂದಿಹನಾ 4

ಶಾಮವರ್ಣ ಚತುರ್ಭುಜನಾ ನಿಜ
ಕಾಮಿನಿ ಸಂಗಡ ನಲಿದಾಡುವನಾ
ಹೇಮ ಗಿರಿಯಲಿದ್ದವನಾ ದೇವ
ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ5
**********