Showing posts with label ನೋಡಿ ನಾ ಧನ್ಯನಾದೆನೊ ತೋತಾದ್ರೀಶನ ankita vijaya vittala NODI NAA DHANYANAADENO TOTADRI MAHIMA. Show all posts
Showing posts with label ನೋಡಿ ನಾ ಧನ್ಯನಾದೆನೊ ತೋತಾದ್ರೀಶನ ankita vijaya vittala NODI NAA DHANYANAADENO TOTADRI MAHIMA. Show all posts

Wednesday, 16 October 2019

ನೋಡಿ ನಾ ಧನ್ಯನಾದೆನೊ ತೋತಾದ್ರೀಶನ ankita vijaya vittala NODI NAA DHANYANAADENO TOTADRI MAHIMA

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ತೋತಾದ್ರಿ ಮಹಿಮಾ ಪದ 

 ರಾಗ ತೋಡಿ 

ನೋಡಿ ನಾ ಧನ್ಯನಾದೆನೋ ತೋತಾದ್ರೀಶನ ॥
ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ ।
ಈಡಿಲ್ಲೆನಿಸುವನ ನೋಡಿ ನಾ ಧನ್ಯನಾದೆನೊ ॥ ಪ ॥

ಆ ರೋಮಹರುಷ ಬಂದು ಏಕಾಂತದಲ್ಲಿ ।
ಆರಾಧಿಸಿದಾ ತಾನಂದು ಭಕುತಿ ಬಿಡದೆ ।
ವಾರವಾರಕ್ಕೆ ಗತಿಯೆಂದು ।
ಈ ರೀತಿಯಲ್ಲಿ ಯಿರೆ ತೋರಿದ ಕರುಣಾಶಿನಿನ್ನಾ ॥ 1 ॥

ಭಕುತನ್ನ ತಪಸಿಗೊಲಿದು ವೇಗದಿಂದಲಿ ।
ಲಕುಮಿರಮಣ ಸುಳಿದು ಬೇಡಿದಂತೆ ತ -।
ಧಿಕವಿತ್ತು ರೋಷವಳಿದು ಸುಖದ ಭಾರತ ।
ಪೇಳೋದಕೆ ಮುನಿ ಮಾಡಿದನ ॥ 2 ॥

ಧರೆಗೆ ದಕ್ಷಿಣದಿಕ್ಕಿಲಿ ಮಾಹೇಂದ್ರಿಯ ಮಹಿ - ।
ಧರನ ಸಮೀಪದಲ್ಲಿ ಪ್ರತಿದಿನ ಮೆರೆವ ॥
ವೈಭೋಗದಿಂದಲಿ ಕರುಣಿ ।
 ವಿಜಯವಿಟ್ಠಲ ವರಧೇನು ಯೆನಿಸುವನ ॥ 3 ॥
*******

ವಿಜಯದಾಸ
ನೋಡಿ ನಾ ಧನ್ಯನಾದೆನೊ ತೋತಾದ್ರೀಶನ
ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ
ಈಡಿಲ್ಲೆನಿಸುವನ ನೋಡಿ ಧನ್ಯನಾದೆನೊ ಪ

ಆರೊ ಮಹಾರೂಪ ಬಂದು ಏಕಾಂತದಲ್ಲಿ
ಆರಾಧಿಸಿದಾತನಂದು ಭಕುತಿ ಬಿಡದೆ
ವಾರವಾರಕ್ಕೆ ಗತಿಯೆಂದು
ಈ ರೀತಿಯಲ್ಲಿ ಇರೆ ತೋರಿದ ಕರುಣ ನಿನ್ನಾ 1

ಭಕುತನ್ನ ತಪಸಿಗೊಲಿದು ವೇಗದಿಂದಲಿ
ಲಕುಮಿ ರಮಣ ಸುಳಿದು ಬೇಡಿದಂಥಾ
ಧಿಕವಿತ್ತು ರೋಷವಳಿದು ಸುಖದ ಭಾರತ ಪೇಳೊ
ದಕ್ಕೆ ಮುನಿ ಮಾಡಿದ ದಾನಾ 2

ಧರಿಗೆ ದಕ್ಷಿಣ ದಿಕ್ಕಿಲಿ ಮಾಹೇಂದ್ರಿ ಮಹಿ
ಧರನ ಸಮೀಪದಲ್ಲಿ ಪ್ರತಿದಿನ
ಮೆರೆವ ವೈಭೋಗದಿಂದಲಿ
ಕರುಣಿ ವಿಜಯವಿಠ್ಠಲ ವರಧೇನು ಎನಿಸುವನಾ3
*********