Showing posts with label ನಮ್ಮ ದೈವ ದೇವನೀತನು mahipati. Show all posts
Showing posts with label ನಮ್ಮ ದೈವ ದೇವನೀತನು mahipati. Show all posts

Wednesday, 1 September 2021

ನಮ್ಮ ದೈವ ದೇವನೀತನು ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು


ನಮ್ಮ ದೈವ ದೇವನೀತನು pa


ನಮ್ಮ ದೈವ ದೇವನೀತ ನಮ್ಮ ಜೀವ ಪ್ರಾಣದಾತ ನಮ್ಮ ಕಾವ ಕರುಣ ಶ್ರೀದೇವನೀತ ನೋಡಿರೊ 1 

ನಿರ್ವಿಕಲ್ಪ ನಿರ್ಗುಣೀತ ನಿರ್ವಿಕಾರ ನಿಷ್ಟ್ರತೀತ ನಿರ್ವಿಶೇಷನಾದ ನಿರಾಳನೀತ ನೋಡಿರೊ 2 

ನಿತ್ಯ ಏಕಶ್ಯಾಂತನೀತ ನಿತ್ಯನಿರಂಜನೀತ ನಿತ್ಯನಿಜ ಮಹಿಪತಿಯ ವಸ್ತುಗತಿಯ ನೋಡಿರೊ 3

***