ಶ್ರೀ ಹರಿ ಸೇವೆಯ ಮಾಡುವ ಬನ್ನಿ ಮಹಾ ಮಹಿಮೆಯ ಕೊಂಡಾಡು ಬನ್ನಿ ಸಹಕಾರದ ಸುಖ ನೋಡುವ ಬನ್ನಿ ಪರದೊಳು ನಲಿದಾಡುವ ಬನ್ನಿ 1
ನೋಡುವ ಬನ್ನಿ ಸದ್ಗುರು ಪಾದ ಬೇಡುವ ಬನ್ನಿ ನಿಜ ಹಿತವಾದ ಕೂಡುವ ಬನ್ನಿ ನಿಜಬೋಧ ಮಾಡುವ ನಿಜ ಭಕ್ತಿಯು ನವವಿಧ 2
ಜಯ ಜಯಕಾರ ಮಾಡುವ ಬನ್ನಿ ಕೈಮುಗಿದು ವರ ಬೇಡುವ ಬನ್ನಿ ಮಹಿಪತಿಸ್ವಾಮಿಯ ನೋಡುವ ಬನ್ನಿ ದಯಾನಿಧಿಯ ಕೊಂಡಾಡುವ ಬನ್ನಿ 3
***