Wednesday 1 September 2021

ಶ್ರೀಹರಿ ಸೇವೆಯ ಮಾಡುವ ಬನ್ನಿ ಮಹಾ ಮಹಿಮೆಯ ಕೊಂಡಾಡು ankita mahipati

 ಶ್ರೀ ಹರಿ ಸೇವೆಯ ಮಾಡುವ ಬನ್ನಿ ಮಹಾ ಮಹಿಮೆಯ ಕೊಂಡಾಡು ಬನ್ನಿ ಸಹಕಾರದ ಸುಖ ನೋಡುವ ಬನ್ನಿ ಪರದೊಳು ನಲಿದಾಡುವ ಬನ್ನಿ 1 

ನೋಡುವ ಬನ್ನಿ ಸದ್ಗುರು ಪಾದ ಬೇಡುವ ಬನ್ನಿ ನಿಜ ಹಿತವಾದ ಕೂಡುವ ಬನ್ನಿ ನಿಜಬೋಧ ಮಾಡುವ ನಿಜ ಭಕ್ತಿಯು ನವವಿಧ 2 

ಜಯ ಜಯಕಾರ ಮಾಡುವ ಬನ್ನಿ ಕೈಮುಗಿದು ವರ ಬೇಡುವ ಬನ್ನಿ ಮಹಿಪತಿಸ್ವಾಮಿಯ ನೋಡುವ ಬನ್ನಿ ದಯಾನಿಧಿಯ ಕೊಂಡಾಡುವ ಬನ್ನಿ 3

***


No comments:

Post a Comment