Showing posts with label ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀಹರಿಕೃಷ್ಣ ಶರಣೆನ್ನಿರೊ kamalanabha vittala. Show all posts
Showing posts with label ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀಹರಿಕೃಷ್ಣ ಶರಣೆನ್ನಿರೊ kamalanabha vittala. Show all posts

Thursday, 5 August 2021

ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀಹರಿಕೃಷ್ಣ ಶರಣೆನ್ನಿರೊ ankita kamalanabha vittala

 ..

kruti by Nidaguruki Jeevubai


ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ-

ಹರಿಕೃಷ್ಣ ಶರಣೆನ್ನಿರೊ ಪ


ಪರಿಪರಿ ದುರಿತಗಳಳಿದು ಪೋಗುವದೆಂದು

ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ


ಹರಿ ಎಂದ ಮಾತ್ರದಲಿ ಹತ್ತಿದ ಪಾಪ

ಪರಿಹಾರಾಗುವುದು ಕೇಳಿ

ಹರಿದಾಸರೊಡನೆ ಕೂಡಿ ಸತ್ಸಂಗದಿ

ಹರಿ ಕೀರ್ತನೆಯನು ಪಾಡಿ

ಹರಿಯ ಮಹಿಮೆಯ ಸ್ಮರಿಸುತಲಿ ಹಗ

ಲಿರುಳು ಚಿಂತನೆ ಮಾಳ್ಪ ಸುಜನರ

ಪರಮ ಕರುಣಾ ಸಾಗರನು ತನ್ನ-

ವರೊಳಿರಿಸುತ ಪೊರೆವ ಸಂತತ 1

ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ

ತ್ವರದಿ ಓಡಿ ಬರಲಿಲ್ಲವೆ

ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ-

ಕ್ಷಯ ವಸ್ತ್ರವೆನಲಿಲ್ಲವೆ

ತರುಳರೀರ್ವರ ಪೊರೆದು ರಕ್ಷಿಸಿ

ಕರೆಯೆ ನಾರಗನೆಂದ ದ್ವಿಜನಿಗೆ

ನರಕ ಬಾಧೆಯ ಬಿಡಿಸಿ ಸಲಹಿದ

ಹರಿಗೆ ಸಮರು ಅಧಿಕರಿಲ್ಲ ಶ್ರೀ 2

ಬಡಬ್ರಾಹ್ಮಣನ ಸತಿಯು ನಯಭಯದಿಂದ

ಒಡೆಯರ್ಯಾರಿಲ್ಲೆನಲೂ

ಪೊಡವೀಶ ಶ್ರೀಪತಿಯು ಪರಮಾಪ್ತನೆನಲು

ಹಿಡಿಯಗ್ರಾಸವ ಕೊಡಲು

ನಡೆದು ದ್ವಾರಕ ದೊಡೆಯನಿಗೆ ಒ-

ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ

ಕೆಡದ ಸೌಭಾಗ್ಯವನೆ ನೀಡಿದ

ಬಿಡದೆ ಕಮಲಾನಾಭ ವಿಠ್ಠಲನ 3

***