Showing posts with label ರಥಾರೂಢ ಮಾರುತ ವಂದಿತ ಯನ್ನಾ sirivatsankita. Show all posts
Showing posts with label ರಥಾರೂಢ ಮಾರುತ ವಂದಿತ ಯನ್ನಾ sirivatsankita. Show all posts

Thursday, 5 August 2021

ರಥಾರೂಢ ಮಾರುತ ವಂದಿತ ಯನ್ನಾ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ರಥಾರೂಢ ಮಾರುತ ವಂದಿತ ಯನ್ನಾ

ಪಥವ ತೋರೋ ಬೇಗ ಮುಂದಿನ

ಪಥವ ತೋರೋ ಬೇಗ ಪ


ಸತೀಸುತರುಗಳು ಅತಿಹಿತರೆಂಬುದು

ಮತಿಗಳ್ದು ಸದ್ಗತಿಯನು ಪಾಲಿಸು ಅ.ಪ.


ದೀನ ಜನರ ಸುರಧೇನುವೆ ನೀ ಬಂಧು

ಆನತ ಜನರನು ಮಾನದಿಂದ ಕಾಯೋ 1


ಹನುಮ ಭೀಮ ಮಧ್ವ ಮುನಿನುತ ದೇವನೀ

ವನರುಹದಳನೇತ್ರ ಅನಿಮಿಷರೊಡೆಯ 2


ದುಷ್ಟ ಜನರುಗಳರಿಷ್ಟಗೋಸುಗ

ಶಿಷ್ಟ್ಟಿಲಿ ಬಂದು ಸುಜನೇಷ್ಟಪ್ರದನಾದಿ 3


ಶಿರಿವತ್ಸಾಂಕಿತ ನಿನ್ನ ಚರಣಕಮಲದಲ್ಲಿ

ನಿರುತ ಭಕುತಿಯಿತ್ತು ಪೊರಿಯುತ ಸರ್ವದಾ 4

***