Showing posts with label ಬಂದನೇನೆ ರಂಗ ಬಂದನೇನೆ ಎನ್ನ ತಂದೆ purandara vittala BANDANENE RANGA BANDANENE ENNA TANDE. Show all posts
Showing posts with label ಬಂದನೇನೆ ರಂಗ ಬಂದನೇನೆ ಎನ್ನ ತಂದೆ purandara vittala BANDANENE RANGA BANDANENE ENNA TANDE. Show all posts

Monday 20 December 2021

ಬಂದನೇನೆ ರಂಗ ಬಂದನೇನೆ ಎನ್ನ ತಂದೆ purandara vittala BANDANENE RANGA BANDANENE ENNA TANDE





ರಾಗ ಶ್ರೀ   ತಾಳ ಆದಿ






ಬಂದನೇನೆ  ರಂಗ  ಬಂದನೇನೆ  ಎನ್ನ ।।ಪ॥

ತಂದೆ ಬಾಲ ಕೃಷ್ಣ  ನವನೀತ ಚೋರ ।।ಅ  ಪ ।।

ಘಲು ಘಲು ಘಲುರೆಂಬ  ಪೊನ್ನಂದಿಗೆ  ಗೆಜ್ಜೆ

ಹೊಳೆ ಹೊಳೆ ಹೊಳೆಯುವ  ಪಾದವನೂರುತ
ನಲಿ ನಲಿ ನಲಿದಾಡುತ ಉಂಗುರ ಅರಳೆಲೆ
ಥಳ  ಥಳ  ಥಳ  ಹೊಳೆಯುತ  ಶ್ರೀ ಕೃಷ್ಣ ।। \\೧\\

ಕಿಣಿ ಕಿಣಿ ಕಿಣಿರೆಂಬ  ಕರದ ಕಂಕಣ ಬಳೆ

ಝಣ  ಝಣ ಝಣರೆಂಬ   ನಡುವಿನ ಘಂಟೆ
ಢಣ  ಢಣ  ಢಣರೆಂಬ ಪಾದದ ತೊಡವಿನ
ಕುಣಿ ಕುಣಿ  ಕುಣಿ ಕುಣಿದಾಡುತ  ಶ್ರೀ ಕೃಷ್ಣ ।। \\೨\\

ಹಿಡಿ ಹಿಡಿ ಹಿಡಿಯೆಂದು  ಪುರಂದರ ವಿಠಲನ

ದುಡು  ದುಡು  ದುಡು  ದುಡನೆ  ಓಡುತ
ನಡಿ  ನಡಿ  ನಡಿಯೆಂದು  ಮೆಲ್ಲನೆ  ಪಿಡಿಯಲು
ಬಿಡಿ ಬಿಡಿ ಬಿಡಿ  ದಮ್ಮಯ್ಯ  ಎನ್ನುತ  ಶ್ರೀ  ಕೃಷ್ಣ ।। \\೩\\
*****


ರಾಗ ಶ್ರೀ. ಆದಿ ತಾಳ (raga, taala may differ in audio)

Bandanene ranga bandanene ||pa||

Enna tande balakrushna navanitacora ||a.pa||

Gilugilugiluremba ponnanduge gejje
Holeholeyuva padavanuruta
Nalinalidaduva ungura aralele
Thalathalathala holeyuta srikrushna ||1||

Kinikinikiniremba karada kankana bale
Janajanajanaremba naduvina gante
Dhanadhanadhanaremba padada todavina
Minimini kunidaduta srikrushna ||2||

Hidihidi hidiyendu purandaravithalana
Dudududududu dudane oduta
Nadenade nadeyendu mellane pidiyalu
Bidibidibidi dammayya ennuta ||3||
***

pallavi

bandanEne ranga bandanEne

anupallavi

enna tande bAlakrSNa navanIta cOra

caraNam 1

ghilu ghilu ghiluremba ponnanduge gejje hoLe hoLeyuva pAdavanUruta
nalinlidADUva ungura araLele thaLa thaLa thaLa hoLeyuta shrI krSNa

caraNam 2

kiNI kiNi kiNirembakarada kankaNa baLe jhaNa jhaNa jhaNaremba naDuvina gaNTe
thaNa thaNa thaNaremba pAdada toDavina miNi miNi kuNidADuta shrI krSNa

caraNam 3

hiDi hiDi hiDiyendu purandara vittalana duDu duDu duDu duDane Oduta
naDe naDe naDeyendu mellana piDiyalu piDi piDi piDi dammayya ennuta
***

ಬಂದನೇನೆ ರಂಗ ಬಂದನೇನೆ, ಎನ್ನ ||ಪ||
ತಂದೆ ಬಾಲಕೃಷ್ಣ ನವನೀತ ಚೋರ ||ಅ||

ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ
ಹೊಳೆ ಹೊಳೆಯುವ ಪಾದವನೂರುತ
ನಲಿನಲಿದಾಡುವ ಉಂಗುರ ಅರಳೆಲೆ
ಥಳಥಳಥಳ ಹೊಳೆಯುತ ಶ್ರೀ ಕೃಷ್ಣ ||

ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ
ಝಣಝಣಝಣರೆಂಬ ನಡುವಿನ ಗಂಟೆ
ಧಣಧಣಧಣರೆಂಬ ಪಾದದ ತೊಡವಿನ
ಮಿಣಿಮಿಣಿ ಕುಣಿದಾಡುತ ಶ್ರೀ ಕೃಷ್ಣ ||

ಹಿಡಿಹಿಡಿಹಿಡಿಯೆಂದು ಪುರಂದರವಿಠಲನ
ದುಡುದುಡುದುಡುದುಡನೆ ಓಡುತ
ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು

ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ ||
****