Showing posts with label ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ prasanna. Show all posts
Showing posts with label ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ prasanna. Show all posts

Friday, 27 December 2019

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ankita prasanna


" ಶ್ರೀ ವಿದ್ಯಾ ಪ್ರಸನ್ನ ತೀರ್ಥರ ಕಣ್ಣಲ್ಲಿ ಶ್ರೀ ರಾಘವೇಂದ್ರತೀರ್ಥರು "

ಯತಿವರ ನಿಮ್ಮನು
 ಸ್ತುತಿಪ ಜನರು ದಿವ್ಯ ।
ಗರಿಯನು ಪೊಂದು-
ವರು ರಾಘವೇಂದ್ರ  ।। ಪಲ್ಲವಿ ।। 

ಕ್ಷಿತಿಯೊಳಗೆ ದಶ ಪ್ರ-
ಮತಿಗಳ ಸುಖಕರ ।
ಮತದ ಪರಮ ಸಂ-
ಗತಿಗಳ ಹರಡಿದ  ।। ಅ. ಪ ।।

ಜಯತೀರ್ಥ ಮುನಿಗಳವರ 
ಗ್ರಂಥಗಳಿಗೆ । ಸುಖ ।
ಮಯ ಟಿಪ್ಪಣಿಗಳ 
ರಚಿಸಿ । ಚಿ ।
ನ್ಮಯ ರಾಮರ ಸೇವೆಯ 
ಸಂತಸದಲಿ ।
ಗಯಿದು ಸುಮಂತ್ರಾ-
ಲಯದಲಿ ನೆಲೆಸಿದೆ ।। ಚರಣ ।।

ಮಂಗಳಕರವಾದ 
ತುಂಗಾ ನದಿಯ । ತ ।
ರಂಗಗಳಲಿ ಮಿಂದು 
ನಿಮ್ಮನು ।
ಕಂಗಳಿಂ ನೋಡಿ 
ಗುಣಗಳ ಪಾಡಿ । ನಿ ।
ಸ್ಸಂಗರಾದ ಸಾಧು ಸಂಗವ 
ಪೊರೆಯುವ  ।। ಚರಣ ।।

ಪರಿ ಪರಿಯಲಿ ನಿಮ್ಮ 
ನಮಿಪ ಸೇವಕರಿಗೆ ।
ಸುರಧೇನುವಿನಂತೆ ಸಂತತ ।
ಹರುಷದಿಂದಲಿ ನಿಮ್ಮ 
ಭಜಿಪ ಸುಜನರಿಗೆ ।
ಸುರತರುವಂತೆ ಪ್ರಸನ್ನ-
ರಾಗುವಂಥ ।। ಚರಣ ।।
*****

ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ
ಗತಿಯನು ಪೊಂದುವರು ರಾಘವೇಂದ್ರ ||

ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ
ಮತದ ಪರಮ ಸಂಗತಿಗಳ ಹರಡಿದ ||

ಜಯ ಮುನಿಗಳವರ ಗ್ರಂಥಗಳಿಗೆ
ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್
ಮಯ ರಾಮರ ಸೇವೆಯ ಸಂತಸದಲಿ
ಗೈದು ಸುಮಂತ್ರಾಲಯದಲಿ ನೆಲೆಸಿದ ||

ಮಂಗಳಕರವಾದ ತುಂಗಾನದಿಯ
ತರಂಗಗಳಲಿ ಮಿಂದು ನಿಮ್ಮನು
ನಿಸ್ಸಂಗರಾದ ಸಾಧು ಸಂಘವ ಪೊರೆಯುವ ||

ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ
ಸುರಧೇನುವಿನಂತೆ ಸಂತತ
ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ
ಸುರತರುವಂತೆ ಪ್ರಸನ್ನರಾಗುವಂಥ ||
********