Showing posts with label ಅನುಮಾನವೇತಕೆ ಅನುಗುಣವಾಗಿಯೆ varaha timmappa. Show all posts
Showing posts with label ಅನುಮಾನವೇತಕೆ ಅನುಗುಣವಾಗಿಯೆ varaha timmappa. Show all posts

Friday, 27 December 2019

ಅನುಮಾನವೇತಕೆ ಅನುಗುಣವಾಗಿಯೆ ankita varaha timmappa

by ನೆಕ್ಕರ ಕೃಷ್ಣದಾಸರು
ಕೇದಾರಗೌಳ ರಾಗ ಅಷ್ಟತಾಳ

ಅನುಮಾನವೇತಕೆ ಅನುಗುಣವಾಗಿಯೆ
ಪ್ರಣವರೂಪನ ಹೋಗಿ ನೋಡಿ ಬರುವುದಕೆ ||ಪ||

ಹೋಗುವ ಎಂದೆಂಬ ಮಾತು ನಿಶ್ಚಯವಾಗಿ
ಬೇಗದ ಪಯಣದಲಿ
ನಾಗಗಿರೀಶನ ಕಂಡು ಕಾಣಿಕೆಯಿತ್ತು
ಸಾಗಿ ಬರುವ ಊರಿಗೆ ಇವರಿಗೆ ||ಅ||

ಕೋನೇರಿವಾಸನ ನಾ ಹೋಗಿ ನೋಡಲು
ಮಾನವ ಜನುಮದಲಿ
ಹೀನ ವೃತ್ತಿಯ ಬಿಟ್ಟು ಜ್ಞಾನಬುತ್ತಿಯ ಕಟ್ಟಿ
ಕಾಣಲು ಇಹಪರವಾತ ತಾನೆರೆವ ||೨||

ರಾಮನ ಶಿಕ್ಷೆಯು ರಾಮನ ರಕ್ಷೆಯು
ರಾಮನ ನಿಜಮತವು
ರಾಮ ಆಂಜನೇಯನ ಗಿರಿಯೊಳು ನಿಂತಿಪ್ಪ
ಭೂಮಿ ವರಾಹ ತಿಮ್ಮಪ್ಪ ||೩||
*******