ವಿಜಯದಾಸ
ಯಾಕೆ ಬಂದೆಯೋ ಎಲೆ ಜೀವ ನೀ
ನ್ಯಾಕೆ ಬಂದೆಯೋ ಎಲೆ ಜೀವ ಈ || ಪ ||
ಲೋಕದ ಅನುಭವ ಬೇಕಾಯ್ತೆ ನಿನಗೆ || ಅ.ಪ ||
ಮೇರು ಪರ್ವತದಲ್ಲಿ ವಾರಣವಂತನಾಗಿ
ಮಾರಮಣನ ಪಾದಭಜನೆಯ ಬಿಟ್ಟು ನೀ || ೧ ||
ಹೊನ್ನು ಹೆಣ್ಣು ಮಣ್ಣು ಮೂರು ತನ್ನದಾದೀತೆಂದು
ಬನ್ನ ಸುಖವ ನಂಬಿ ಬಂದೆಯಾ ಜೀವ || ೨ ||
ಆದದ್ದೆಲ್ಲಾಯಿತು ಹೋದ ಮಾತುಗಳ್ಯಾಕೆ
ಶ್ರೀದ ವಿಜಯವಿಠಲನ ನೆನೆಕಂಡ್ಯ ಮನವೇ || ೩ ||
***
ರಾಗ : ಸಿಂಧುಭೈರವಿ ತಾಳ : ಆದಿ (raga tala may differ in audio)
Yake bandeyo ele jiva ni- ||pa||
Nyake bandeyo ele jiva I
Lokada anubava bekayte ninage ||a.pa||
Meru parvatadalli varanavantanagi
Maramanana pada Bajaneya bittu ni ||1||
Honnu henna mannu muru tannadaditendu
Banna sukava nambi bandeya jiva ||2||
Adaddellayitu hoda matugalyake
Srida vijayavithalana nenekandya manave ||3||
***
pallavi
yAke bandi jIvA yAke bandi lOkada savisukha anubhavavAyittu
caraNam 1
mEru parvatadalli vAraNavantanAgi shrI ramaNana dhyAna ArAdhaneya biTTu
caraNam 2
uDige toDige iTTu aDigaDige sukha baDuvanembudage I pADu baDalu nDu
caraNam 3
uNNu uNNu uNNu matte uNNu heNNu honnu maNNu nInAdhInavendi
caraNam 4
alligallige jnAna baravallavarakUDa ella kAladali nalidADOdu biTTu
caraNam 5
AdaddAyittu hOta mAtugaLEke shrIdhara vijayaviThalana mareyadiru
***
ರಾಗ ಯಮನ್
ಯಾಕೆ ಬಂದಿ ಜೀವಾ ಯಾಕೆ ಬಂದಿ |
ಲೋಕದ ಸವಿಸುಖ ಅನುಭವವಾಯಿತು ಪ
ಮೇರು ಪರ್ವತದಲ್ಲಿ ವಾರಣವಂತನಾಗಿ |
ಶ್ರೀ ರಮಣನ ಧ್ಯಾನ ಆರಾಧನೆಯ ಬಿಟ್ಟು 1
ಉಡಿಗೆ-ತೊಡಿಗೆ ಇಟ್ಟು ಅಡಿಗಡಿಗೆ ಸುಖ |
ಬಡುವೆನೆಂಬುದಕೆ ಈ ಪಾಡುಬಡಲು ನೋಡು 2
ಉಣ್ಣು ಉಣ್ಣು ಉಣ್ಣು ಮತ್ತೆ ಉಣ್ಣು
ಹೆಣ್ಣು-ಹೊನ್ನು-ಮಣ್ಣು ನಿನ್ನಾಧೀನವೆಂಬೀ 3
ಅಲ್ಲಿಗಲ್ಲಿಗೆ e್ಞÁನ ಬಲ್ಲವರ ಕೂಡ |
ಎಲ್ಲ ಕಾಲದಲಿ ನಲಿದಾಡೋದು ಬಿಟ್ಟು 4
ಆದದ್ದಾಯಿತು ಹೋದ ಮಾತುಗಳೇಕೆ |
ಶ್ರೀಧರ ವಿಜಯವಿಠ್ಠಲನ ಮರೆಯದಿರು 5
***
ಯಾಕೆ ಬಂದಿ ಜೀವಾ ಯಾಕೆ ಬಂದಿ |
ಲೋಕದ ಸವಿಸುಖ ಅನುಭವವಾಯಿತು ಪ
ಮೇರು ಪರ್ವತದಲ್ಲಿ ವಾರಣವಂತನಾಗಿ |
ಶ್ರೀ ರಮಣನ ಧ್ಯಾನ ಆರಾಧನೆಯ ಬಿಟ್ಟು 1
ಉಡಿಗೆ-ತೊಡಿಗೆ ಇಟ್ಟು ಅಡಿಗಡಿಗೆ ಸುಖ |
ಬಡುವೆನೆಂಬುದಕೆ ಈ ಪಾಡುಬಡಲು ನೋಡು 2
ಉಣ್ಣು ಉಣ್ಣು ಉಣ್ಣು ಮತ್ತೆ ಉಣ್ಣು
ಹೆಣ್ಣು-ಹೊನ್ನು-ಮಣ್ಣು ನಿನ್ನಾಧೀನವೆಂಬೀ 3
ಅಲ್ಲಿಗಲ್ಲಿಗೆ e್ಞÁನ ಬಲ್ಲವರ ಕೂಡ |
ಎಲ್ಲ ಕಾಲದಲಿ ನಲಿದಾಡೋದು ಬಿಟ್ಟು 4
ಆದದ್ದಾಯಿತು ಹೋದ ಮಾತುಗಳೇಕೆ |
ಶ್ರೀಧರ ವಿಜಯವಿಠ್ಠಲನ ಮರೆಯದಿರು 5
***