Showing posts with label ಪಾರ್ವತಿ ದಕ್ಷಕುಮಾರಿ ನಿನ್ನ ಸಾರ್ವೆ ಸಂತತ pranesha vittala PARVATI DAKSHAKUMARI NINNA SAARVE SANTATA. Show all posts
Showing posts with label ಪಾರ್ವತಿ ದಕ್ಷಕುಮಾರಿ ನಿನ್ನ ಸಾರ್ವೆ ಸಂತತ pranesha vittala PARVATI DAKSHAKUMARI NINNA SAARVE SANTATA. Show all posts

Tuesday 5 October 2021

ಪಾರ್ವತಿ ದಕ್ಷಕುಮಾರಿ ನಿನ್ನ ಸಾರ್ವೆ ಸಂತತ ankita pranesha vittala PARVATI DAKSHAKUMARI NINNA SAARVE SANTATA



by ಪ್ರಾಣೇಶದಾಸರು
ಪಾರ್ವತಿ ದಕ್ಷಕುಮಾರಿ ನಿನ್ನ | 
ಸಾರ್ವೆ ಸಂತತ ಕುಜನಾರೀ ||ಆಹಾ||
ದೂರ್ವಾಸನರ್ಧಾಂಗಿ ಸರ್ವಜೆÕ ಯನ್ನಯ ||
ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ||pa||

ದುರ್ಗೆ ಭವಾನಿ ರುದ್ರಾಣಿ ಗೌರಿ | 
ಸ್ವರ್ಗಜಿನಾರಾಧ್ಯ-ಮಾನಿ ||
ಸೇರೆದುರ್ಗುಣದವರ ಸುಜ್ಞಾನಿ | 
ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||
ನಿರ್ಗುಣರಾದುತ್ತಮರ್ಗೆವೊಲಿವ ಅಪ |
ವರ್ಗದ ನಾಳೆ ನರರ್ಗೆ ಮಣಿಸದಿರೆ ||1||

ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | 
ಮಂಡೆಯವನಸೊಸೆ | ಯಮ್ಮಾ |
ನಾಡೆಕಂಡು ಭಜಿಪೆನಿತ್ಯನಿಮ್ಮ |
ಪಾದಪುಂಡರೀಕದ್ವಯವಮ್ಮಾ ||ಆಹಾ||
ಉಂಡು ವಿಷವ ನಿನ್ನಗಂಡಬಳಲಿ ಕೈ |
ಕೊಂಡೌಷಧ ತಂಡ ತಂಡದಲೆನಗೀಯೆ ||2||

ಪಾವಕನೊಳು ಪೊಕ್ಕ ಪತಿವ್ರತೆ | 
ಯಾವಾಗ ಮಾನಿಸತ್ಕಥೆ |
ಯಲ್ಲಿಭಾವನೆ ಕೊಡೆಪ್ರತಿಪ್ರತಿ | 
ಜಾವ ಜಾವಕೆ ಷಣ್ಮುಖಮಾತೆ ||ಆಹಾ||
ಕೋವಿದರೊಡತಿ ಕೇಳಾವಾಗ ವೈರಾಗ್ಯ |
ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ ||3||

ಬೇಡಿದಭೀಷ್ಟವ ಕೊಡುವೆ | 
ದಯ ಮಾಡಿ ಭಕ್ತರಕರಪಿಡಿವೆ |
ದೋಷಕಾಡುಳಿಯದಂತೆ ಸುಡುವೆ | 
ನಿನ | ಗೀಡೆ ಮಹದ್ಭಯಕಡಿವೆ ||ಆಹಾ||
ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |
ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ ||4||

ಮೇಶ ಪ್ರಾಣೇಶ ವಿಠ್ಠಲನೆ | 
ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |
ಪೋಷಿಪುದೆನ್ನ ಸುಜಾಣೆ | 
ನೀನುದಾಸಿಸೆ ನಾನಾರಕಾಣೆ ||ಆಹಾ||
ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |
ಈ ಶರೀರದೊಳಿಹ್ಯಘಾಸಿಮಾಡುವನನ್ನು||5||
*****

ಪಾರ್ವತೀದೇವಿ ಸ್ತೋತ್ರ
ಪಾರ್ವತಿ ದಕ್ಷಕುಮಾರಿ ನಿನ್ನ | ಸಾರ್ವೆ ಸಂತತ ಕುಜನಾರೀ ||ಆಹಾ||ದೂರ್ವಾಸನರ್ಧಾಂಗಿ ಸರ್ವಜೆÕ ಯನ್ನಯ ||ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ಪ

ದುರ್ಗೆ ಭವಾನಿ ರುದ್ರಾಣಿ ಗೌರಿ | ಸ್ವರ್ಗಜಿನಾರಾಧ್ಯ-ಮಾನಿ || ಸೇರೆದುರ್ಗುಣದವರ ಸುಜ್ಞಾನಿ | ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||ನಿರ್ಗುಣರಾದುತ್ತಮರ್ಗೆವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ 1

ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | ಮಂಡೆಯವನಸೊಸೆ | ಯಮ್ಮಾ | ನಾಡೆಕಂಡು ಭಜಿಪೆನಿತ್ಯನಿಮ್ಮ |ಪಾದಪುಂಡರೀಕದ್ವಯವಮ್ಮಾ ||ಆಹಾ||ಉಂಡು ವಿಷವ ನಿನ್ನಗಂಡಬಳಲಿ ಕೈ |ಕೊಂಡೌಷಧ ತಂಡ ತಂಡದಲೆನಗೀಯೆ 2

ಪಾವಕನೊಳು ಪೊಕ್ಕ ಪತಿವ್ರತೆ | ಯಾವಾಗ ಮಾನಿಸತ್ಕಥೆ | ಯಲ್ಲಿಭಾವನೆ ಕೊಡೆಪ್ರತಿಪ್ರತಿ | ಜಾವ ಜಾವಕೆ ಷಣ್ಮುಖಮಾತೆ ||ಆಹಾ||ಕೋವಿದರೊಡತಿ ಕೇಳಾವಾಗ ವೈರಾಗ್ಯ |ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ 3

ಬೇಡಿದಭೀಷ್ಟವ ಕೊಡುವೆ | ದಯ ಮಾಡಿ ಭಕ್ತರಕರಪಿಡಿವೆ | ದೋಷಕಾಡುಳಿಯದಂತೆ ಸುಡುವೆ | ನಿನ | ಗೀಡೆ ಮಹದ್ಭಯಕಡಿವೆ ||ಆಹಾ||ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ 4

ಮೇಶ ಪ್ರಾಣೇಶ ವಿಠ್ಠಲನೆ | ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |ಪೋಷಿಪುದೆನ್ನ ಸುಜಾಣೆ | ನೀನುದಾಸಿಸೆ ನಾನಾರಕಾಣೆ ||ಆಹಾ||ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |ಈ ಶರೀರದೊಳಿಹ್ಯಘಾಸಿಮಾಡುವನನ್ನು 5
****