Showing posts with label ಶ್ರೀಜಗನ್ನಾಥದಾಸ ನಮಿಪೆ shreeda vittala jagannatha dasa stutih. Show all posts
Showing posts with label ಶ್ರೀಜಗನ್ನಾಥದಾಸ ನಮಿಪೆ shreeda vittala jagannatha dasa stutih. Show all posts

Friday, 27 December 2019

ಶ್ರೀಜಗನ್ನಾಥದಾಸ ನಮಿಪೆ ankita shreeda vittala jagannatha dasa stutih

ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ||pa||

ಈ ಜಗದೊಳು ನಿಮಗೆಣೆಗಾಣೆ ಸತತ ನಿ –
ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ||a.pa||

ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ
ಚರಿಸುತ ಧರೆಯೊಳು ಮೆರೆವ ಮಹಾತ್ಮರ
ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ
ದುರಿತರಾಶಿಗಳಿರಗೊಡದೆ ನೆರೆ
ಪರಮಮುಕ್ತಿಯ ದಾರಿ ತೋರುತ
ಸಿರಿಸಹಿತ ಹರಿ ತೋರುವಂದದಿ
ಕರುಣ ಮಾಳ್ಪ ಸುಗಣಮಹೋದಧಿ ||1||

ರವಿಯು ಸಂಚರಿಸುವಂತೆ ಭೂವಲಯದಿ
ಕವಿಶ್ರೇಷ್ಠ ಚರಿಸಿದೆಯೋ
ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ
ಭುವನೈಕ ವೇದವದ್ಯನ ಶ್ರವಣಭಕುತಿಯಿಂದ
ದಿವಸ ದಿವಸದಿ ಪ್ರೀತಿ ಬಡಿಸುತ
ಧ್ರುವವರನಂಘ್ರಿಗಳಿಗರ್ಪಿಸಿ
ಭುವನ ಪಾವನ ಮಾಡಲೋಸುಗ
ಅವನಿ ತಳದಿ ವಿಹರಿಸುತಿಹ ಗುರು ||2||

ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ –
ದ್ಗುಹಾಧೀಶನನು ಬಿಡದೆ
ಸಹನ ಗುಣಗಳನ್ನು ಅನುದಿನ ಸ್ಮರಿಸುತ
ಸಹನದಿ ಶಮದಮಯತು ನಿಯಮಗಳನ್ನು
ವಹಿಸಿ ಶ್ರೀದವಿಠಲನಂಘ್ರಿಯ
ಮಹಿಮೆ ತೋರುತ ಪೂಜಿಸುತ ಬಲು
ಮಹಿತಪೂರ್ಣಾನಂದತೀರ್ಥರ
ವಿಹಿತ ಶಾಸ್ತ್ರಗಳರಿತು ಬೋಧಿಪ ||3||
********