Showing posts with label ಸಾರ್ವಭೌಮ ನೀರಾಮ ಶರಣರಕ್ಷಕ ನೇಮ mahipati. Show all posts
Showing posts with label ಸಾರ್ವಭೌಮ ನೀರಾಮ ಶರಣರಕ್ಷಕ ನೇಮ mahipati. Show all posts

Monday, 2 August 2021

ಸಾರ್ವಭೌಮ ನೀರಾಮ ಶರಣರಕ್ಷಕ ನೇಮ ankita mahipati

ಸಾರ್ವಭೌಮ ನೀರಾಮ ಶರಣರಕ್ಷಕ ನೇಮ P


ಸೀತಾಮನೋಹರ ಸೇತುಗಟ್ಟಿದ ಶೂರ

ಹತ್ತು ತಲಿಯವನ ಮಾಡಿದೊ ಸಂಹಾರ

ಖ್ಯಾತಿಗೆ ತಂದ್ಯೊ ವಿಭೀಣಗೆ ಸ್ಥಿರ 1


ಕುಡುವೆ ನೀ ವರಪೂರ್ಣ ದೃಢ ಭಕ್ತರ ಪ್ರಾಣ

ಆಡುದೊಂದೆ ವಚನ ಬಿಡುವದೊಂದೆ ಬಾಣ

ಜಡವಾಗಿದ್ದ ಶಿಲೆಯೆ ಮಾಡಿದ್ಯುದ್ದರಣ 2


ಸಮಸ್ತ ಜನಪ್ರಿಯ ಸೋಮಶೇಖರ ಧೇಯ್ಯ

ನಾಮ ಸ್ಮರಿಸುವರಿಗಿಹೆ ಹೃದಯ

ಸ್ವಾಮಿ ನೀನಹುದೊ ದಾಸ ಮಹಿಪತಿಯ 3

****