Showing posts with label ಏರಿ ಬಂದನು ಸೂರ್ಯ ನಾರಾಯಣ ರಥ ಏರಿ ಬಂದನು gopalakrishna vittala ERI BANDANU SURYA NARAYANA RATHA ERI BANDANU. Show all posts
Showing posts with label ಏರಿ ಬಂದನು ಸೂರ್ಯ ನಾರಾಯಣ ರಥ ಏರಿ ಬಂದನು gopalakrishna vittala ERI BANDANU SURYA NARAYANA RATHA ERI BANDANU. Show all posts

Saturday, 4 December 2021

ಏರಿ ಬಂದನು ಸೂರ್ಯ ನಾರಾಯಣ ರಥ ಏರಿ ಬಂದನು ankita gopalakrishna vittala ERI BANDANU SURYA NARAYANA RATHA ERI BANDANU

 


ಏರಿ ಬಂದನು ಸೂರ್ಯ 

ನಾರಾಯಣ ರಥ

ಏರಿ ಬಂದನು ಸೂರ್ಯ ||ಪ||


ಏರಿ ಬಂದನು ಸೂರ್ಯ ರಥವನು

ಭಾರಿ ವಸನಾಭರಣ ತೊಡುತಲಿ

ಮೂರುಲೋಕವ ಬೆಳಗು ಮಾಡುತ

ಭಾರಿ ತಮವನು ಛೇದಿಸುತ್ತ ||ಅ.ಪ||


ಸಪ್ತ ಹಯೆಗಳ್ ಕಟ್ಟುತ ಚಕ್ರೇಕ ರಥಕೆ

ಸಪ್ತ ಋಷಿಗಳ್ ಪೊಗಳುತ ಅರುಣ ಸಾರಥ್ಯ

ಸಪ್ತ ಜಿಹ್ವನ ತೆರದಿ ತೋರುತ

ಸಪ್ತ ಶರಧಿಯ ದಾಟಿ ಸಾರುತ

ಸಪ್ತಗಿರಿ ಮೇರು ಸುತ್ತುತಾ 

ರಥಸಪ್ತಮಿ ಶುಭ ದಿವಸದಲ್ಲಿ ||೧||


ವಾಲಖಿಲ್ಯರು ಎದುರಲಿ ಅರವತ್ತು ಸಾವಿರ

ಓಲಗ ತೊಡುತಲಲ್ಲೀ ಹಿಂದು ಮುಂದಿನಲಿ

ಗಾಲಿದಬ್ಬುವ ರಕ್ಕಸೊಬ್ಬನು

ವ್ಯಾಳನೊಬ್ಬನು ರಜ್ಜರೂಪಕೆ

ಮೇಲೆ ಯಕ್ಷಕಿನ್ನರರು ಸುತ್ತಲು

ಕಾಲಕಾರಿವ ಕರ್ಮ ಸಾಕ್ಷಿಯು ||೨||


ಉತ್ತರಾಯಣ ಮಾಘದಿ ಸ್ನಾನವಗೈದು

ಉತ್ತಮರರ್ಘ್ಯ ಕರದಿ ಪಿಡಿಯುತ್ತ ಭರದಿ

ಉತ್ತಮ ಗಂಗಾದಿ ತೀರ್ಥದಿ

ಉದಿಸಿ ಬರುವಗೆ ಕೊಡುವ ಕತದಿ

ಚಿತ್ತ ನಿರ್ಮಲದಿಂದ ಕಾದಿರೆ

ಹತ್ತಿ ಛಾಯೆಯೆ ಸಹಿತ ರಥದಿ ||೩||


ಜಗಚಕ್ಷುವೆನಿಸಿದನೊ ಧರ್ಮಜಗೆ ವಲಿದು

ಮಿಗೆ ಅಕ್ಷಪ್ರದನಾದನೊ ಸವಿತೃ ನಾಮಕನೊ

ಬಗೆ ಬಗೆಯ ಜೀವರುಗಳಾಯುವ

ತೆಗೆದು ಸೆಳೆಯುತ ದಿನದಿನದಲಿ

ನಿಗಮಗೋಚರನಾಜ್ಞೆಧಾರಕ

ಸುಗುಣರಿಗೆ ಸುಜ್ಞಾನವೀಯುತ ||೪||


ಶಂಖ ಚಕ್ರಾ ಕಮಲ ಗದೆಯ ಧರಿಸಿ

ಕಿಂಕರಾದ್ಯರ ನುತಿಗಳ ಕೇಳುತ್ತ ಬಹಳ

ಶಂಖ ಚಕ್ರಾಂಕಿತನು ಶಿರಿಸಹ

ಶಂಕಿಸದೆ ತನ್ನ ಹೃದಯದಲ್ಲಿರೆ

ಬಿಂಕ ಗೋಪಾಲಕೃಷ್ಣವಿಠಲಗೆ

ಕಿಂಕರನು ತಾನೆಂದು ಪೊಗಳುತ ||೫||

***


Eri bandanu surya 

narayana ratha

eri bandanu surya ||pa||


Eri bandanu surya rathavanu

bhari vasanabharana todutali

murulokava belagu maduta

bhari tamavanu chedisutta ||a.pa||


Sapta hayegal kattuta chakreka rathake

sapta rushigal pogaluta aruna sarathya

sapta jihvana teradi toruta

sapta sharadhiya dati saruta

saptagiri meru suttuta 

rathasaptami shubha divasadalli ||1||


Valakhilyaru edurali aravattu savira

olaga todutalalli hindu mundinali

galidabbuva rakkasobbanu

vyalanobbanu rajjarupake

mele yakshakinnararu suttalu

kalakariva karma sakshiyu ||2||


Uttarayana maghadi snanavagaidu

uttamararghya karadi pidiyutta bharadi

uttama gangadi tirthadi

udisi baruvage koduva katadi

chitta nirmaladinda kadire

hatti chayeye sahita rathadi ||3||


Jagachakshuvenisidano dharmajage validu

mige akshapradanadano savitru namakano

bage bageya jivarugalayuva

tegedu seleyuta dinadinadali

nigamagocharanajnedharaka

sugunarige sujnanaviyuta ||4||


Shankha chakra kamala gadeya dharisi

kinkaradyara nutigala kelutta bahala

shankha chakrankitanu sirisaha

shankisade tanna hrudayadallire

binka gopalakrishnavittalage

kinkaranu tanendu pogaouta ||5||

***

ಏರಿ ಬಂದನು ಸೂರ್ಯ | ನಾರಾಯಣ ರಥ

ಏರಿ ಬಂದನು ಸೂರ್ಯ ಪ.


ಏರಿ ಬಂದನು ಸೂರ್ಯ ರಥವನು

ಭಾರಿ ವಸನಾಭರಣ ತೊಡುತಲಿ

ಮೂರುಲೋಕವ ಬೆಳಗು ಮಾಡುತ

ಭಾರಿ ತಮವನು ಛೇದಿಸುತ್ತ ಅ.ಪ.


ಸಪ್ತ ಹಯೆಗಳ್ ಕಟ್ಟುತ | ಚಕ್ರೇಕ ರಥಕೆ

ಸಪ್ತ ಋಷಿಗಳ್ ಪೊಗಳುತ | ಅರುಣ ಸಾರಥ್ಯ

ಸಪ್ತ ಜಿಹ್ವನ ತೆರದಿ ತೋರುತ

ಸಪ್ತ ಶರಧಿಯ ದಾಟಿ ಸಾರುತ

ಸಪ್ತಗಿರಿ ಮೇರು ಸುತ್ತುತಾ ರಥ

ಸಪ್ತಮಿ ಶುಭ ದಿವಸದಲ್ಲಿ 1

ವಾಲಖಿಲ್ಯರು ಎದುರಲಿ | ಅರವತ್ತು ಸಾವಿರ

ಓಲಗ ತೊಡುತಲಲ್ಲೀ | ಹಿಂದು ಮುಂದಿನಲಿ

ಗಾಲಿದಬ್ಬುವ ರಕ್ಕಸೊಬ್ಬನು

ವ್ಯಾಳನೊಬ್ಬನು ರಜ್ಜರೂಪಕೆ

ಮೇಲೆ ಯಕ್ಷಕಿನ್ನರರು ಸುತ್ತಲು

ಕಾಲಕಾರಿವ ಕರ್ಮ ಸಾಕ್ಷಿಯು 2

ಉತ್ತರಾಯಣ ಮಾಘದಿ | ಸ್ನಾನವಗೈದು

ಉತ್ತಮರಘ್ರ್ಯ ಕರದಿ | ಪಿಡಿಯುತ್ತ ಭರದಿ

ಉತ್ತಮ ಗಂಗಾದಿ ತೀರ್ಥದಿ

ಉದಿಸಿ ಬರುವಗೆ ಕೊಡುವ ಕತದಿ

ಚಿತ್ತ ನಿರ್ಮಲದಿಂದ ಕಾದಿರೆ

ಹತ್ತಿ ಛಾಯೆಯೆ ಸಹಿತ ರಥದಿ 3

ಜಗಚಕ್ಷುವೆನಿಸಿದನೂ | ಧರ್ಮಜಗೆ ವಲಿದು

ಮಿಗೆ ಅಕ್ಷಪ್ರದನಾದನೂ | ಸವಿತೃ ನಾಮಕನೂ

ಬಗೆ ಬಗೆಯ ಜೀವರುಗಳಯುವ

ತೆಗೆದು ಸೆಳೆಯುತ ದಿನದಿನದಲಿ

ನಿಗಮಗೋಚರ ನಾಜ್ಞೆಧಾರಕ

ಸುಗುಣರಿಗೆ ಸುe್ಞÁನವೀಯುತ 4

ಶಂಖ ಚಕ್ರಾ ಕಮಲ | ಗದೆಯ ಧರಿಸಿ

ಕಿಂಕರಾದ್ಯರ ನುತಿಗಳ | ಕೇಳುತ್ತ ಬಹಳ

ಶಂಖ ಚಕ್ರಾಂಕಿತನು ಶಿರಿಸಹ

ಶಂಕಿಸದೆ ತನ್ನ ಹೃದಯದಲ್ಲಿರೆ

ಬಿಂಕ ಗೋಪಾಲಕೃಷ್ಣವಿಠಲಗೆ

ಕಿಂಕರನು ತಾನÉಂದು ಪೊಗಳುತ 5

****