ಆಂಜನೇಯ ಪಾಲಯ ಆಂಜನೇಯ ಜಯ ಜಯ |
ಪ್ರಾಂಜಲಿ ಮುಗಿವೆ ಪ್ರಭಂಜನ ಸುತನಯ||
ರಾಮನುಂಗುರವನು ಪ್ರೇಮದಿ ಸೀತೆಗೆ |
ಕ್ಷೇಮವನರುಹಿ ಸಮರ್ಪಿಸಿದ |
ಭಾಮೆ ಶಿರೋಮಣಿ ಸ್ವಾಮಿಗೆ ಸಲಿಸಿದ ||
ಕಿಂಕರನಾಗಿ ಆ ಲಂಕೆಯ ದಹಿಸಿ ಲಂಕಿಣಿ ಪ್ರಮುಖರ |
ಸಂಹರಿಸಿ ಲಂಕೇಶನ ಮುಖ | ಬಿಂಕವ ಕೆಡಿಸಿದ ||
ಭಕ್ಷಿಸಿ ಫಲಗಳ ರಾಕ್ಷಸ ವನದೊಳು ಅಕ್ಷಕುಮಾರರ |
ಶಿಕ್ಷಿಸಿದ ಲಕ್ಷ್ಮಣ ಪ್ರಾಣ ಸಂರಕ್ಷಕನೆನಿಸಿದ ||
ತರಿದು ರಾವಣನ ಶಿರವ ಶ್ರೀರಾಮನು ತಿರುಗಿ ಪುರಕೆ ವರ |
ಸತಿಯೊಡನೆ ಬರುವುದು ಭರತಗೆ ತ್ವರಿತದಿ ಪೇಳ್ದನೆ||
ಸೀತಾ ಲಕ್ಷ್ಮಣ ಭರತ ಶತ್ರುಘ್ನ ಸಮೇತ ರಾಮ |
ತಾರಕನೆನುತ ಪ್ರೀತಿಸಿ ನರಹರಿ ವಿಠ್ಠಲನ ಜಪಿಸಿದ ||
***
Lyrics in English
Anjaneya palaya anjaneya jayajaya |
pranjali mugive prabhanjana sutanaya ||
Ramanunguravanu premadi seetege |
kshemavanaruhi samarpisida |
bhame shiromani swamige salisida ||
Kinkaranagi aa lankeya dahisi pramukhara |
samharisi lankeshana mukha | binkava kedisida ||
Bhakshisi phalagala rakshasa vanadolu akshakumarara |
shikshisida lakshana prana samrakshakanenisida ||
Taridu ravanana shirava sriramanu tirugi purake vara |
satiyodane baruvudu bharatage twaritade peldane ||
Seeta lakshana bharata shatrugna sameta rama |
tarakanenuta preetisi narahari vittalana japisida ||
***