ನಿದ್ರೆ ಬಂತಿದೆಕೋ ಅನಿ- ಪ
ರುದ್ಧನ ಸೇವೆಗೆ ವಿಘ್ನವ ಮಾಡುತ್ತ ಅ
ಅಸ್ತಮಾನದಿಂದ ಉದಯವಾಗೋತನಕಸ್ವಸ್ಥದಿ ಪಗಡೆ ಪಂಜಿಯನಾಡುತವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲಪುಸ್ತಕ ಹಿಡಿಯಲು ಮಸ್ತಕ ಮಣಿಸುತ 1
ಹರಿಕಥಾಶ್ರವಣ ಮಾಡಬೇಕೆನುತಲಿಪರಮ ಭಕುತಿಯಿಂದ ಕುಳ್ಳಿರಲುಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ್ತಗುರುಗುರು ಗುಟ್ಟುತ ಕೊರಳ ತೂಗಿಸುತ 2
ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆಹಲವು ಪರಿಯಲ್ಲಿ ಈ ನಿದ್ರೆಯುಛಲದಿಂದ ಮನುಜರ ನೇಮ ಕೆಡಿಸುತಿದೆಒಲಿದು ಶ್ರೀಕೃಷ್ಣನ ಜಾಗರ ಮಾಳ್ಪಲ್ಲಿ3
****