ತಿರುಪತಿಯ ಶ್ರೀ ವೆಂಕಟೇಶ
ಇಷ್ಟು ದಿನ ಈ ಶೇಷಾದ್ರಿ ಎಷ್ಟು ದೂರವೊ ಎನುತಿದ್ದೆದೃಷ್ಟಿಯಿಂದ ನೋಡಿದೆ ನಾ ಬೆಟ್ಟದೊಡೆಯನಂಘ್ರಿ ಕಮಲ ಪ
ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1
ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2
ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3
ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4
ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5
ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6
ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7
ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8
ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9
ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10
ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11
ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12
ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13
ಜಯ ಜಯ ಜಯ ಮಂಗಲಂ ಹರಿಗೆ ಜಯ ಜಯ ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
***