Showing posts with label ಗೋಪಿ ದೇವಿ ಎಂತು ಪೇಳಲೆ ನಾನೆಂತು ತಾಳಲೆ vijaya vittala. Show all posts
Showing posts with label ಗೋಪಿ ದೇವಿ ಎಂತು ಪೇಳಲೆ ನಾನೆಂತು ತಾಳಲೆ vijaya vittala. Show all posts

Wednesday, 16 October 2019

ಗೋಪಿ ದೇವಿ ಎಂತು ಪೇಳಲೆ ನಾನೆಂತು ತಾಳಲೆ ankita vijaya vittala

ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ

ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ |
ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ ||
ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು |
ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1

ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ |
ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ ||
ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ |
ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2

ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು |
ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ ||
ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ |
ಕಕ್ಕಸದಲಿ ಬಲು ಕಕ್ಕಲಾತಿಯಲಿ 3

ಬಿರಬಿರನೆ ತಾ ಬಂದು ಬೆದರಿ ಎನಗಂದು |
ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ ||
ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು |
ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4

ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ |
ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ ||
ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು |
ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5

ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು |
ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ ||
ಭಂಡು ಮಾಡತಾನೆ ಭಂಡಿಯ ಗೋವಳಗಿಂದು |
ದಂಡಿಸವ್ವಾ ದಂಡವನು ಕೊಡು ನೀನು 6

ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ |
ಉದ್ದಂಡನಿವನು ತಂಡ ತಂಡದಲಿ ತುರು- ||
ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
***

pallavi

gOpi dEvi entu pALave nAnentu tALale

caraNam 1

shrIpati bandu nindu EkAntavannu ADutAne pApA inthAduNTEnE kELE lakSmIkAntanItane
manthana mADuvalli manthaNiya oDedanu kuntaLava piDidu enna kuLLirisida kiribevera norasidA

caraNam 2

cikka makkaLa kUDu cakkane tA bandu bEga bekku konni markaTava tandanammA idu cendavEnamma
ukkutiha pAlgoDagaLa uruLisidA summane cokkavEne summane mosara suridA mIsalu muridA

caraNam 3

rakkasaragaNDa namma rAjyadoLagivagennu takka buddhiya pELuvaru dAru mIrida gOpage
sikka piDidEvendara sikka namma yuvaaguDi gaDDi bEDave kakkasadali balu kakkulAteyali

caraNam 4

bira birane tA bandu bedari enagandu haraviya hAlu kuDidA tA etta ODidane
vArigaNNi nindali nODi odagi baLige bandu tOravAda kucagLa piDidAnE balidanEnE

caraNam 5

hAra padakavu hiDi hiDiyendu enna kUDa sarasavanADalikke arasanEne namage puruSanEnE
puruSaru kaNDanenna pari pari bAdhisyAru taraLana karedhELu tiddi nInu ivage buddhi

caraNam 6

caNDanADutali cikka miNDiyaraka kaNDunAtAnu caNDu anta kucagaLa piDidAnE inthaduNTEnE
bhaNDu mADatAne bhaNDiya gOvaLagindu daNDisavvA daNDavanu koDu nInu

caraNam 7

canDa pracaNDanivanu gOpikeyarigella uDDaNDanivanu kaNDa kaNDadali turuhiNDUgaLa
kAyiva golla bAlakanammA pANduranga vijayaviThalarAya balaudhiTTanivanu
***