Showing posts with label ಹಿತಮಾಳ್ಪ ಜನಕನಾಗಿ ರಕ್ಷಸು guruvijaya vittala ankita suladi ಪ್ರಾರ್ಥನ ಸುಳಾದಿ. Show all posts
Showing posts with label ಹಿತಮಾಳ್ಪ ಜನಕನಾಗಿ ರಕ್ಷಸು guruvijaya vittala ankita suladi ಪ್ರಾರ್ಥನ ಸುಳಾದಿ. Show all posts

Thursday, 5 August 2021

ಹಿತಮಾಳ್ಪ ಜನಕನಾಗಿ ರಕ್ಷಸು guruvijaya vittala ankita suladi ಪ್ರಾರ್ಥನ ಸುಳಾದಿ

 ...by modalakallu sheshadasaru

[ಶ್ರೀ ಪ್ರಾಣದೇವರ ಅನುಗ್ರಹವಿಲ್ಲದೆ ಶ್ರೀ ಹರಿಯು ಎಂದಿಗೂ ಒಲಿಯನೆಂಬ ಪ್ರಮೇಯ. ಪೂರ್ವಜನ್ಮದಲ್ಲಿ ವಾಲಿ ಹನುಮಂತನ ಅನುಗ್ರಹವಿಲ್ಲದ ಕಾರಣ ರಾಮನು ನಿಗ್ರಹಿಸಿದ. ಅರ್ಜುನನಾದಾಗ್ಗೆ ಭೀಮನು ಅಗ್ರಜನಾಗಿ ದಯ ಮಾಡಿದುದಕ್ಕೆ ಕೃಷ್ಣನು ಸಖನಾದ. ಮೂರನೆ ಜನ್ಮ ಜಯತೀರ್ಥರಾದಾಗ್ಗೆ ಜ್ಞಾನವಿತ್ತು ಕುಮತಗಳ ನಿರಾಕರಿಸಿದಿ ಪ್ರಾಣನ ಕೃಪೆಯಿಂದ ಎಲ್ಲ ಸೌಖ್ಯ ಗಂಟು. ಈಗಾದರು ಹಿಂದಿನಂತೆ ಪೊರೆಯೊ ಎಂದು ಪ್ರಾರ್ಥನೆ.]

ಧ್ರುವತಾಳ

ಹಿತಮಾಳ್ಪ ಜನಕನಾಗಿ ರಕ್ಷಸು ಎಂದೆಂಬೆನೆಪಿತೃ ಸಮಾನ ಜೇಷ್ಠನೆಂದೆಂಬ ವಿಧದಿ ಪಿತನೆ ಸರಿ ಎನಗೆ ಉಪಕಾರವ್ಯಾತಕಿನ್ನುಮಾತರಿಶ್ವನೆ ದೂರ ನೋಳ್ಪದೇನೊಭಾತೃನಾಗಿ ಎನ್ನ ಪಾಲಿಸು ಎಂದೆಂಬೆನೆನೋತ ಪುಣ್ಯಗಳಿಂದ ಹರಿಯು ತಾನೆ ಸ್ವತ ಏವ ಮಾಡಿದ ಈಗ ನುಡಿವದೇನೊಮಾತೃ ನೀನೆ ದೇಹ ಪೊರೆಯುವಲ್ಲಿಅತುಳ ಗುರುವಾಗಿ ಬೋಧಿಸು ಎಂದೆಂಬೆನೆಆತ್ಮ ಗುರುವಿಗೆ ನಿಜ ಗುರುವೆನಿಸಿದೆ ನಿತ್ಯನೂತನವಾಗಿ ಯಿದನು ಬೇಡಿಕೊಂಬುವದೇನುವೀತಿ ಹೋತ್ರನೆ ದೈತ್ಯ ಸಂತತಿಗೆಪ್ರತ್ಯಂತರ ಜನುಮದ್ವಯದಿ ನಿಜ ಮುಖದಿಂದಲೆಮತಿಯು ನೀಡಿದ ಮುಖ್ಯ ಗುರು ನೀನೆ ಪ್ರತಿಯಿಲ್ಲದೆ ಇದ್ದ ಇಷ್ಟನೇನೊ ಎನಗೆಗತಿ ಪ್ರದಾತನು ನೀನೆ ಆವಕಾಲಆಪ್ತನಾಗಿ ನೀನು ಸಲಹಬೇಕೆಂಬೆನೆ ಗತ ಜನ್ಮಗಳಲಿ ನೀನು ಮಾಡಿದುಪ-ಕೃತಿಗಳೆಣಿಸೆ ಈಗ ನಿನಗಿಂದಧಿಕವಾದಆಪ್ತನಾವನು ಎನಗೆ ಅರಸಿ ನೋಡಾಮತಿಯು ರಹಿತವಾದ ಜನುಮಗಳು ಬರಲಿಅತಿ ಹಿತ ನೀನೆ ಎನಗೆ ಇಹ ಪರದಿಅತಿಶಯ ಕೃಪಾನಿಧೆ ಗುರು ವಿಜಯ ವಿಠ್ಠಲರೇಯಅತಿ ಪೀಯನಾಗುವನು ನಿನ್ನ ದಯದಿ 1

ಮಟ್ಟತಾಳ

ಬಾಂಧವನು ನೀನೆ ಎರಡು ಬಗೆಯಿಂದ ತಂದೆ ನಿನ್ನುಪಕಾರ ಅನಂತ ಜನುಮದಲಿಮಂದನಾದವ ನನು ತೀರಿಸಬಲ್ಲೆನೆಬಂಧು ಅನಿಮಿತ್ಯ ಗುರು ವಿಜಯ ವಿಠ್ಠಲ ನಿ-ನ್ನಿಂದಲಿ ಎನಗೆ ಅನುಗ್ರಹ ಮಾಡುವನೊ 2

ತ್ರಿವಿಡಿತಾಳ

ನಿನ್ನ ಕರುಣಪೇಕ್ಷ ಮಾಡದಲೆ ಒಂದುಜನುಮ ಹರಿ ಕರುಣವಿಲ್ಲದಲೆ ಕಳದೇಅನಂತರದಿ ಎನ್ನ ಪುಣ್ಯ ಸಾಸಿರದಿಂದಅನುಜನಾದೆ ನಿನ್ನ ಕೃಪೆಯಿಂದಲಿಮನುಜ ಕೃತಿಯಾದರು ಪ್ರತಿಮದಲ್ಲಿ ಘನ್ನ ಚೇಷ್ಟಾದಿಗಳು ತೋರಿದಂತೆ ಎನ್ನ ನಾಮಕನಾಗಿ ಎನ್ನ ರೂಪದಿಂದಎನ್ನ ಕೃತ್ಯಗಳೆಲ್ಲ ನೀನೆ ಮಾಡಿಉನ್ನತವಾದ ಕೀರ್ತಿ ತಂದು ಇತ್ತು ಎನ್ನಜನ್ನರ ಮಧ್ಯದಲಿ ಶ್ರೇಷ್ಠನೆನಸಿಪನ್ನಗ ತಲ್ಪನ್ನ ಕರವಶನೆನನಿಸಿದಿನಿನ್ನ ಕರುಣಕೆ ಎಣೆ ಆವದಯ್ಯಾಎನ್ನ ಸ್ವಭಾವದಿಂದ ಹರಿ ತಾನು ಇನಿತಾದ ಮನ್ನಣೆ ಮಾಡುವನೆ ಎಂದಿಗನ್ನನಿನ್ನುಪಕಾರವೆಂಬ ವನ್ನಧಿಯೊಳಗೆ ನಿರುತಮುಣಗಿ ಇಪ್ಪೆನಯ್ಯಾ ತೆರವಿಲ್ಲದೆ ಚನ್ನ ಪ್ರಸನ್ನ ಗುರು ವಿಜಯ ವಿಠ್ಠಲರೇಯನಿನ್ನಿಂದಲೆ ಎನಗೆ ಬಂಧುನಾದಾ 3

ಅಟ್ಟತಾಳ

ಸೈರಿಸದೆ ಅಪಕೃತಿ ಮಾಡಲಾಕ್ಷಣ ಪರಮ ಕರುಣದಿಂದ ಪೊರೆದು ತತ್ವವನರುಹಿಮರಳೆ ಜನ್ಮದಲಿ ಮೂಢ್ಯನಾದವನಿಗೆ ಸರಿಗಾಣದೆ ಇದ್ದು ವಿಮಲ ಜ್ಞಾನವನಿತ್ತುಹರಿಯೇ ಸರ್ವೋತ್ತಮನೆಂತೆಂಬೊ ಪ್ರಕಟದಿಧರೆಯೊಳಗೆ ಬೀರಿ ಕುಜನ ಮತದ ಬೀಜಹುರಿಸಿದಿ ನಿನ್ನಯ ಕರುಣಕ್ಕೆ ಎಣೆಯುಂಟೆಸರಿಯಿಲ್ಲ ಸರಿಯಿಲ್ಲ ನಿನ್ನುಪಕಾರಕ್ಕೆ ದುರುಳ ಮತಗಳೆಂಬೊ ಮಾಯಿ ಗೋಮಾಯಿಗಳುಶಿರವೆತ್ತಿ ನೋಡದೆ ಪಲಾಯಧ್ವರಾದರು ಈತೆರವಾದ ಮಹತ್ಮಿ ನಿನ್ನದು ನಿನ್ನದುಮರಳೆ ಮಾತುಗಳನ್ನು ತೋರದಿದ್ದರನಿಗೆ (ರೆನಗೆ)ಕರುಣವಲ್ಲದೆ ಅನ್ಯಾಲೋಚನೆ ಇದಕ್ಕಿಲ್ಲಸುರಲೋಲ ಮಹಧೃತಿ ಗುರು ವಿಜಯ ವಿಠ್ಠಲರೇಯಪೊರೆವನು ನಿನ್ನಯ ಬಲದಿಂದಲಾವಾಗ 4

ಆದಿತಾಳ

ನಿನ್ನ ಕೃಪೆಯಿಂದ ಜ್ಞಾನವಂತರಾಹರೆಲ್ಲನಿನ್ನ ಕೃಪೆಯಿಂದ ಬಲವೀರ್ಯರಾಹರೈಯ್ಯಾನಿನ್ನ ಕೃಪೆಯಿಂದ ಐಶ್ವರ್ಯವಂತರೆಲ್ಲ ನಿನ್ನಯ ಕೃಪೆಯಿಂದ ಹರಿ ತಾನು ಒಲಿವನುನಿನ್ನಯ ಕೃಪೆಯಿಂದ ಪರಲೋಕವಾಗುವದುನಿನ್ನಯ ಕೃಪೆಯಿಂದ ಅನಾದಿ ಲಿಂಗ ದೇಹಛಿüನತ್ವ ಐದುವದು ಸಂಶಯ ಇದಕ್ಕಿಲ್ಲಚಿನ್ಮಯ ಮೂರ್ತಿ ಗುರು ವಿಜಯ ವಿಠ್ಠಲರೇಯನಿನ್ನಿಂದ ಮಾಡಿಸುವ ವಸುಧಿಯ ವ್ಯಾಪಾರ 5

ಜತೆ

ನಿನ್ನ ಕರುಣದಿಂದ ನಿಖಿಳ ಸೌಖ್ಯವೆ ಉಂಟುಉನ್ನತ ಮಹಿಮ ಗುರು ವಿಜಯ ವಿಠ್ಠಲ ಒಲಿವ ||

[ನಳ ನಾಮ ಸಂ|| ಚೈತ್ರ ಬ|| 12 ಆದಿತ್ಯವಾರ]

*****