Showing posts with label ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ramesha. Show all posts
Showing posts with label ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ramesha. Show all posts

Wednesday, 4 August 2021

ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ankita ramesha

 ..

ಕೋಲೆಂದು ಪಾಡಿರೆ ಕೋಮಲೆಯರೆಲ್ಲಾ ಅಮ್ಮಯ್ಯ ಗೋಪಾಲ ಕೃಷ್ಣಯ್ಯಗ ಶರಣಿಂದು ಕೋಲ ಪ.


ಮುದ್ದು ಸುಭದ್ರ ನೀನು ಗೆದ್ದುಬರುತಿಯೆಂದುಎದ್ದ ಬೃಹಸ್ಪತಿಯು ತವಕದಿ ಕೋಲಎದ್ದ ಬೃಹಸ್ಪತಿಯು ತವಕದಿ ಅರ್ಜುನ ಸಿದ್ಧ ಮಾಡೆಂದ ರಥಗಳ ಕೋಲ 1

ಕೇಳಿರಿ ನಿಮಗೆಲ್ಲ ಭಾಳ ಬಲವದೆಕಾಳಿ ಮೊದಲಾದ ಕೆಲದೆಯರುಕಾಳಿ ಮೊದಲಾದ ಕೆಲದೆಯರು ಹರುಷದಿ ಹೇಳಿ ಬೃಹಸ್ಪತಿಯು ನುಡಿದಾನು ಕೋಲ2

ಪಾಂಡವರೆಲ್ಲರು ಉಂಡು ವೀಳ್ಯವನ್ಹಾಕಿಪುಂಡರಿಕಾಕ್ಷನ ಅರಮನೆಗೆ ಕೋಲಪುಂಡರಿಕಾಕ್ಷನ ಅರಮನೆಗೆ ಐವರುತಂಡ ತಂಡದಲೆ ನಡೆದಾರು ಕೋಲ3

ದ್ರೌಪದಿ ಸುಭದ್ರಾ ಇಬ್ಬರು ಒಂದಾಗಿಅಗಣಿತ ಒನಿತೆಯರು ಕೋಲಅಗಣಿತ ಒನಿತೆಯರು ಕೂಡಿಕೊಂಡು ತಾವುಪ್ರೇಮದಿಂದಲಿ ಬರುತಾರೆ ಕೋಲ 4

ಅರಿಷಿಣ ಕುಂಕುಮ ಗಂಧಬೆರೆಸಿ ಪರಿಮಳದಿಂದಸರಸಾದ ಸುರಭಿ ಕುಸುಮವ ಕೋಲಸರಸಾದ ಸುರಭಿ ಕುಸುಮರಾಮೇಶನ ಅರಸಿಯರಿಗೆ ಒಯ್ವೋ ಉಪಚಾರ ಕೋಲ 5

****