..
kruti by ಲಕ್ಷ್ಮೀನಾರಯಣರಾಯರು Lakshminarayanaru
ಜಯತೀರ್ಥರಾಯಾ ಗುರುವರ್ಯಾ
ಮುಗಿವೆನು ಕೈಯ್ಯಾ ಪ
ತೋಯಜಾಕ್ಷನಂಘ್ರಿ ಪ್ರೀಯ - ಜೀಯ
ಮಳಬೇಡ ನಿಲಯ ಅ.ಪ
ಮೋದ ತೀರ್ಥಗ್ರಂಥ ಕ್ಷೀರ ವಾರಿಧಿಯನ್ನು ಮಥಿಸಿ ಧೀರ
ಸಾಧುಗಳಿಗೆ ಸುಧೆಯನೆರದೆ - ವಾದಿಗಳೆದಯ ಮುರಿದೇ 1
ಅದ್ವೈತಾರಣ್ಯದಹನ - ಮಧ್ವ ಪಂಥಸುಜನಸದನ
ಪೊದ್ದಿದೆನೋ ನಿನ್ನ ಚರಣ - ಉದ್ಧರಿಸೋ ದೀನೋದ್ಧರಣ 2
ಅಕ್ಷಯಮಾಲಾ ದಂಡ ಧಾರೀ - ಭಿಕ್ಷುಶ್ರೇಷ್ಠನಧಿಕಾರಿ
ಅಕ್ಷೋಭ್ಯ ಮುನಿಪ ತನಯ - ಲಕ್ಷ್ಮೀಕಾಂತ ಭಜಕ ಸದಯ 3
***