Showing posts with label ಏನಿದು ಕೌತುಕವೋ ವಿಠಲಾ ಏನಿದು ಕೌತುಕವೋ shreeda vittala ENIDU KAUTUKAVO VITTALA ENIDU KAUTUKAVO. Show all posts
Showing posts with label ಏನಿದು ಕೌತುಕವೋ ವಿಠಲಾ ಏನಿದು ಕೌತುಕವೋ shreeda vittala ENIDU KAUTUKAVO VITTALA ENIDU KAUTUKAVO. Show all posts

Sunday, 5 December 2021

ಏನಿದು ಕೌತುಕವೋ ವಿಠಲಾ ಏನಿದು ಕೌತುಕವೋ ankita shreeda vittala ENIDU KAUTUKAVO VITTALA ENIDU KAUTUKAVO

 



kruti by Srida Vittala Dasaru  Karjagi Dasappa


ಏನಿದು ಕೌತುಕವೋ ವಿಠಲಾ

ಏನಿದು ಕೌತುಕವೋ ಪ


ಏನಿದು ಕೌತುಕ ಪಂಢರಿಯನೆ ಬಿಟ್ಟು

ನೀನಿಲ್ಲಿಗೆ ಬಂದ್ಯ ವಿಠಲಾ ಅ.ಪ.


ಮಿಥ್ಯಾವಾದಿಗಳು ನಿನ್ನ ಸುತ್ತುಮುತ್ತಿಕೊಂಡು

ಅತ್ತು ಕರೆದು ಕೂಗುತ್ತಿರೆ ಬಹು ಬ್ಯಾಸತ್ತು ಬಂದೆಯಾ ವಿಠಲ 1


ಮಧ್ವದ್ವೇಷಿಗಳು ಮಾಡುವ ಪದ್ಧತಿಯನು ಕಂಡು

ಹೃದ್ಯವಾಗದೆ ಕದ್ದ ಕಳ್ಳನಂತೆದ್ದು ಇಲ್ಲಿಗೆ ಬಂದ್ಯಾ ವಿಠಲಾ 2


ಶ್ರೀzವಿಠಲ ನಿಮ್ಮ ಸದ್ಗುಣ ವೇದಶಾಸ್ತ್ರದಲ್ಲಿ

ಶೋಧಿಸಿ ನೋಡುವ ಭೂದೇವರಿಗೊಲಿದಾದರಿಸಲು

ಬಂದ್ಯಾ ವಿಠಲಾ 3

***


ವಿಠ್ಠಲನಿಗೆ ಪ್ರೀತಿಕರ

 ಯಜ್ಞ ವಧದಲ್ಲಿ ಯೂಪಸ್ತಂಭಕ್ಕೆ ಕಟ್ಟಿದ ಮೇಕೆಯು ಇನ್ನೊಂದು ಕ್ಷಣದಲ್ಲಿ ತನ್ನ ವಧವಾಗುವದೆಂದು ಅರಿಯದೇ ಹೇಗೆ ಸ್ತಂಭಕ್ಕೆ ಕಟ್ಟಿದ ತಳಿರು ತೋರಣಗಳನ್ನು ತಿನ್ನುತ್ತದೆಯೋ, ಅದರಂತೆ, ತಾಮಸರು ಸರ್ವೋತ್ತಮನೆಂಬ ಜ್ಞಾನವಿಲ್ಲದೆ ರಾಮನಾಮ ಭಜಿಸಿದ್ದಕ್ಕೆ ಮೇಕೆ ತಳಿರು ತೋರಣ ಮೆದ್ದಂತೆ ಇಹದಿ ಕಿಂಚಿತ ಸೌಖ್ಯಕೊಟ್ಟು ಕೊನೆಗೆ ವಧಮಾಡಿ ತಾಮಸರಿಗೆ ಅಂಧತಮಸ್ಸೇ ಕೊಡುವನು ನಿಜ. ಈ ತತ್ವವನ್ನರಿತ ಶ್ರೀ ಜಗನ್ನಾಥದಾಸಾರ್ಯರ ಸಾಕ್ಷಾತ್ ಶಿಷ್ಯರೂ ಅಪರೋಕ್ಷ ಜ್ಞಾನಿಗಳೂ ಆದ ಶ್ರೀ ಶ್ರೀಧವಿಠ್ಠಲರು (ಕರ್ಜಗಿ ದಾಸಪ್ಪದಾಸರು) ಶ್ರೀ ವಿಠಲದೇವರು ಪಂಡರಪುರದಿಂದ ವಿಜಯನಗರ ವಿಠಲ ದೇವಾಲಯಕ್ಕೆ ತಾವಾಗಿ ಅನುಗ್ರಹಿಸಿ ದಯಮಾಡಿದ್ದನ್ನು ಒಂದು ಪದದಲ್ಲಿ ವರ್ಣಿಸಿದ್ದಾರೆ.


"ಏನಿದು ಕೌತುಕವೋ ವಿಠಲಾ ನೀನಿಲ್ಲಿಗೆ ಬಂದ್ಯಾ 

ವಿಠಲ ಪಂಢರಪುಯನು ಬಿಟ್ಟು। ವಿಠಲ ನೀನಿಲ್ಲಿಗೆ ಬಂದ್ಯಾ ॥ಪ॥


ಮಧ್ವದ್ವೇಷಿಗಳು ಮಾಡುವ ಪದ್ಧತಿಯನೆ ಕಂಡು ವಿಠಲಾ ।

ಸದ್ದು ಮಾಡದೇ ಕದ್ದು ಕಳ್ಳ ನಿಂತಿದ್ದಿಲ್ಲಿಗೆ ಬಂದ್ಯಾ ವಿಠಲಾ ॥೧॥


ಮಿಥ್ಯಾವಾದಿಗಳು ನಿನ್ನನು ಸುತ್ತು ಮುತ್ತಿಕೊಂಡು ವಿಠಲ ।

ಅತ್ತು ಕರೆದು ಕೂಗುತ್ತಿರೆ ಬಹು ಬ್ಯಾಸತ್ತು ಹೊರಟುಬಂದ್ಯಾ ॥೨॥


ಶ್ರೀದವಿಠಲ ನಿನ್ನ ಸದ್ಗುಣ ವೇದಶಾಸ್ತ್ರಗಳಲಿ ವಿಠಲಾ ।

ಶೋದಿಸಿ ನೋಡಲು _ ಭೂದೇವರಿಗೊಲಿದಾದರಿಸಲು ಬಂದ್ಯಾ ವಿಠಲ ॥೩॥


ಮಿಥ್ಯಾಮತದವರು ಏನೂ ಸ್ತೋತ್ರ ಮಾಡಿದರೂ ಅವರ ಆ ಸ್ತೋತ್ರವು ಅಳುವುದು ಕರೆಯುವುದು ಕೂಗುವದೇ ಅಲ್ಲದೇ ವಿಠ್ಠಲನಿಗೆ ಪ್ರೀತಿಕರವಲ್ಲ.

 ‌(received in WhatsApp)

***