Showing posts with label ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ purandara vittala. Show all posts
Showing posts with label ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ purandara vittala. Show all posts

Friday, 6 December 2019

ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ purandara vittala

ರಾಗ ಧನಶ್ರೀ ಆದಿ ತಾಳ

ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ ||ಪ||
ಸೃಷ್ಟಿಯಲಿ ನಾರಿಯರು ಕಣ್ಣಿಟ್ಟು ಹೀರುವರು ಕಾಣೆ ||ಅ||

ಬಿಟ್ಟ ಕಣ್ಣ ಮುಚ್ಚಲಿಲ್ಲ
ಮುಟ್ಟಗೊಡ ಬೆನ್ನಮುಳ್ಳ
ಇಷ್ಟು ಗಂಟಲೊಳು ಗುರು-
ಗುಟ್ಟಿ ಗುಟ್ಟಿತೇ ನಮ್ಮ ||

ತೆರೆದ ಬಾಯ ಮುಚ್ಚಲಿಲ್ಲ
ಕಿರಿದಾಯಿತು ತನುವಿದೆಲ್ಲ
ಭರದಿ ಪೆತ್ತ ತಾಯ ಕಂಡರೆ
ಸೇರಲೊಲ್ಲನೆ ||

ಅನ್ನವನ್ನು ಉಣಲಿಲ್ಲ
ಎನ್ನ ಮನೆ ಬೆಣ್ಣೆಯೆಲ್ಲ
ಚೆನ್ನ ವಸ್ತ್ರ ಹೊದಿಸಲು
ತಾನೊಲ್ಲನೆ ||

ರಾಜರಾಜರಲ್ಲಿ ತೇಜಿ
ಮಾಜಿ ರಥವ ನಡೆಸಿ
ಮಾಜಿ ವಾಜಿಯನ್ನು ಹತ್ತು
ಎಂದರೆ ಯಾಕೆ ಒಲ್ಲನೆ ||

ಅರಿತವರ್ಯಾರು ಮಂತ್ರತಂತ್ರ
ಕರೆದು ಭಸಿತ ಹಾಕಿರಮ್ಮ
ಧರೆಯೊಳು ಪುರಂದರವಿಠಲನ
ಸ್ಮರಣೆ ಮಾಡಿದರಿಂದ ||
***

pallavi

drSTi tAgite namma krSNarAyage

anupallavi

shrSTiyali nAriyaru kaNNiTTu hIruvaru kANe

caraNam 1

biTTa kaNNa muccalilla muTTa koDa bennamuLLa iSTu kaNDaloLu guru guTTi guTTidE namma

caraNam 2

tereda bAya muccalilla kiridAyitu tanuvidella bharadi petta tAya kaNDare sEralollane

caraNam 3

annavannu uNalilla enna mane beNNeyella cenna vastra hodisalu tAnollane

caraNam 4

rAjarAjaralli tEji mAji rathava naDesi mAji vAjiyannu hattu endare yAke ollane

caraNam 5

aridaryAru mantra tantra karedu bhasita hAkiramma dhareyoLu purandara viTTalana smaraNe mADidarinda
***