ಬಾಳೊ ಸುಖದಿ ಬಾಲನೆ ವರಗುಣ ಶೀಲನೆ ಪ
ಬಾಳೊ ಸುಖದಿ ಬಹುಕಾಲಶ್ರೀವೇಣು ಗೋ-
ಪಾಲನ ದಯದಿ ಸುಶೀಲ ಸತಿಯಳ ಕೂಡಿ 1
ವಾಯುಸುತನ ಪಾದ ತೋಯಜ ಸ್ಮರಿಸುತ
ಕಾಯದಾರೋಗ್ಯದೀರ್ಘಾಯುತ್ವವ ಪಡೆದು 2
ಕೃದ್ಧನಾಗದೆ e್ಞÁನ ವೃದ್ಧರಸೇವಿಸಿ
ಮಧ್ವಮತದ ತತ್ವ ಶ್ರದ್ಧದಿ ಕೇಳುತ 3
ತಂದೆ ತಾಯಿಗಳಲ್ಲಿ ಇಂದಿರೆರಮಣನೆ
ನಿಂದು ಪಾಲಿಪನೆಂದು ವಂದನೆ ಪಾಡುತ 4
ಭಕ್ತಿಯಿಂದತಿಥಿಗಳ ನಿತ್ಯದಿ ಸೇವಿಸುತ
ಪುತ್ರ ಪೌತ್ರಾದಿ ಸಂಪತ್ತಿಯ ಪಡೆದು 5
ಭೂಸುರರೊಡಗೂಡಿ ತೋಷದಿಕೃತ ಹರಿ
ವಾಸರ ವೃತ ಫಲ ಶ್ರೀಶನಿಗರ್ಪಿಸುತ 6
ಧಾರುಣಿಯೊಳು ಕೃಷ್ಣಾತೀರ ಕಾರ್ಪರನಿಲಯ
ನಾರಸಿಂಹನ ಪದ ವಾರಿಜ ಸೇವಿಸುತ 7
****