Showing posts with label ಏಳೆಲೋ ರಂಗೇಶ ಏಳೆಲೋ ಜಗದೀಶ purandara vittala. Show all posts
Showing posts with label ಏಳೆಲೋ ರಂಗೇಶ ಏಳೆಲೋ ಜಗದೀಶ purandara vittala. Show all posts

Wednesday 4 December 2019

ಏಳೆಲೋ ರಂಗೇಶ ಏಳೆಲೋ ಜಗದೀಶ purandara vittala

ರಾಗ ಪುನ್ನಾಗವರಾಳಿ ರೂಪಕತಾಳ

ಏಳೆಲೋ ರಂಗೇಶ , ಏಳೆಲೋ ಜಗದೀಶ ||ಪ||
ಸಂಸಾರಾಂಭುಧಿಯಲ್ಲಿ , ಶರೀರವೆಂಬೋ ಪಾಡೆಯಲ್ಲಿ ||ಅ||

ಕಂಸಾರಿ ವ್ಯವಹಾರಿ , ಕಡುಲೋಭಿ ಜೀವಶೆಟ್ಟಿ
ಕಾಲವೆಂಬೊ ಕಳ್ಳಪಾಡೆ , ಕಲಹಂಸಾವುಂಡಿರುವ
ಕ್ರೂರನೆಂಬೊ ಕಳ್ಳ ಬಂಟ, ಕಿಡಿಗೇಡಿ ನೋಡುತಿಹ
ಬಾರಯ್ಯ ಈಗ , ತೋರಯ್ಯ ಈಗ
ಭಾರ ಬಿದ್ದಾಗ , ಶರಣಾದೆನೀಗ
ಹಿಂದೆ ಮುಂದೆ ನಿಂತು ಕಾಯೊ , ಇಂದು ಬಾರೆಂದು
ತಂದೆಯಂತೆ, ಕಂದನೆ ಏಳೆಲೊ ||

ಕಾಮನೆಂಬೊ ಕೂರ್ಮಗಳು , ಕ್ರೋಧವೆಂಬೊ ಮಡುಗಳು
ಲೋಭವೆಂಬೊ ಮೊಸಳೆಗಳು , ಮೋಹವೆಂಬೊ ಮತ್ಸ್ಯಗಳು
ಮದವೆಂಬೊ ಮದ್ದಾನೆಗಳು , ಮತ್ಸರವೆಂಬೊ ಕುದುರೆಗಳು
ಬಾರಯ್ಯ ಈಗ , ತೋರಯ್ಯ ಈಗ
ಭಾರ ಬಿದ್ದಾಗ , ಶರಣಾದೆನೀಗ
ಹಿಂದೆ ಮುಂದೆ ನಿಂತು ಕಾಯೊ , ಇಂದು ಬಾರೆಂದು
ತಂದೆಯಂತೆ, ಕಂದನೆ ಏಳೆಲೊ ||

ಮೃತ್ಯುಲೋಕ ಪಟ್ಟಣದೊಳು, ಮನೆಬಾಗಿಲನೆ ಮಾಡಿ
ಹೀಗಿದೆಯೆಂದು ತಿಳಿದುಕೊಂಡು , ಭವಗಡಲ ಕಡೆಗಾಣದೆ
ಕೊಡಹಿನಲ್ಲಿ ಕಡೆ ತೋರಿಸೊ ಎನ್ನನು , ಕರುಣಿ ಪುರಂದರವಿಠಲ
ಬಾರಯ್ಯ ಈಗ , ತೋರಯ್ಯ ಈಗ
ಭಾರ ಬಿದ್ದಾಗ , ಶರಣಾದೆನೀಗ
ಹಿಂದೆ ಮುಂದೆ ನಿಂತು ಕಾಯೊ , ಇಂದು ಬಾರೆಂದು
ತಂದೆಯಂತೆ, ಕಂದನೆ ಏಳೆಲೊ ||
********