Showing posts with label ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ karpara narahari. Show all posts
Showing posts with label ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ karpara narahari. Show all posts

Monday, 2 August 2021

ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ ankita karpara narahari

ಶ್ವೇತಗಿರಿನಿವಾಸ ಕೇಶವ ನೀಡೆನಗೆ ಮುದವಾ ಪ


ಭೂತಳದಿ ಪ್ರಖ್ಯಾತವಾದ ಶ್ವೇತಗಿರಿನಿವಾಸಯನ್ನ

ಪಾತಕ ವಾರಿಧಿಗೆ ಕುಂಭ ಜಾತನೆನಿಸಿ

ಪೊರಿಯೊ ದೇವಾ ಅ.ಪ


ಭೂತನಾಥ ನಿಮ್ಮಯ ಪದ

ಪಾಥೋರುಹ ಭಜಿಪ ಸತತ

ಸೀತ ಲಕ್ಷ್ಮಣ ರಘು ನಾಥನು

ಸಂಚರಿಸಿದಂಥ 1


ಸಪ್ತಋಷಿಗಳಿರುವ ಕೃಷ್ಣಾ

ಚೋತ್ತರ ವಾಹಿನಿಯ ಸ್ನಾನ

ಕ್ಷೇತ್ರಕಾಶಿಗಿಂತ ಫಲದಿ

ಉತ್ತಮವೆಂದೆನಿಸಿದಂಥ 2


ಶ್ರೀಮನೋಹರ ನಿಮ್ಮಯ ಪದ

ತಾಮರಸವ ಪೂಜಿಸಲು

ಸೂತ್ರಾಮ ಲೋಕದಿಂದ ಬರುವ

ಕಾಮಧೇನು ಚರಿಸಿದಂಥ 3


ಅಷ್ಟತೀರ್ಥಂಗಳಿರುವ

ಶ್ರೇಷ್ಠಸ್ಥಾನವೆಂದು ತಿಳಿದು

ನಿಷ್ಠೆಯಿಂದ ಸೇವಿಸುವರ

ಭೀಷ್ಠಗಳನ್ನು ಸಲಿಸುವಂಥ 4


ಶ್ವೇತರಾಜ ತಪವಗೈದು

ಪೂತವಾದ ಪದವಿ ಪಡೆದ

ಆ ತರುವಾಯದಲಿ ಗಿರಿಯು

ಶ್ವೇತನಾಮದಿಂದ ಮೆರೆಯೆ 5


ಸ್ಕಂದ ಪುರಾಣೋಕ್ತ ಮಹಿಮೆ

ಅಂದವಾಗಿ ತಿಳಿದು ಭಕುತಿ

ಯಿಂದ ಶೇವಿಪ ಮನುಜಗೆ ಭವ

ಬಂಧ ಬಿಡಿಸ್ಯಾನಂದ ಗರಿವ 6


ತುಂಗಗಿರಿಯ ಸ್ಥಾನದಲ್ಲಿ

ಶೃಂಗನೆಂಬ ಋಷಿಯು ತಪದಿ

ಮಂಗಳ ಪ್ರದ ಕಾರ್ಪರನರ

ಸಿಂಗನೊಲಿಸಿ ವರವ ಪಡೆದ 7

*****