Showing posts with label ಕರುಣಿಸಿನ್ನಾದರೆ ರಂಗ ಸುರಾರಿಭಂಗ prasannavenkata. Show all posts
Showing posts with label ಕರುಣಿಸಿನ್ನಾದರೆ ರಂಗ ಸುರಾರಿಭಂಗ prasannavenkata. Show all posts

Monday, 11 November 2019

ಕರುಣಿಸಿನ್ನಾದರೆ ರಂಗ ಸುರಾರಿಭಂಗ ankita prasannavenkata

by ಪ್ರಸನ್ನವೆಂಕಟದಾಸರು
ಕರುಣಿಸಿನ್ನಾದರೆ ರಂಗ ಸುರಾರಿಭಂಗ ಕರುಣಿಸಿನ್ನಾದರೆ ರಂಗ ಪ.

ಹುಳು ಹಕ್ಕಿ ನಾಯಿ ನರಿ ಗಿಡ ಹುಲ್ಲು ಮುಳ್ಳುಗಳಜನ್ಮವಾಂತು ನಾ ಬಳಲಿದೆ ರಂಗನೆಲೆಗಾಣೆನಿನ್ನು ಮಾನಿಸನಾಗಿ ವೃಥನಾದೆಗುಳದ ಹಣ್ಣಿಗೆ ಸೊರಗಲ್ಯಾಕೊ ರಂಗ 1

ತುದಿಮೊದಲಿಗೆ ಮದ ಮತ್ಸರದಿಂ ಬೇಗುದಿಗೊಂಡು ನಿನ್ನಂಘ್ರಿ ಮರೆದೆನೊ ರಂಗಪದುಮನಾಭನೆ ನನ್ನ ಹೊರೆಯಲಾರೆಯಹುಲ್ಲೆವದನಕ್ಕೆ ಮುಳ್ಳ ಕಡಿವಾಣ್ಯಾಕೊ ರಂಗ 2

ಮಲೆತವನಾದರೊದಿಯೊ ನಿನ್ನಂಗಣದೊಳುತೊಳಲುವ ನಾಯಿಗೆ ಕ್ಲೇಶವು ಸಲ್ಲ ರಂಗಹಲವು ದುಷ್ಕøತ ನಿನ್ನ ನಾಮ ಘೋಷಣೆಯಲ್ಲಿನಿಲ್ಲಬಲ್ಲವೆ ಪ್ರಸನ್ವೆಂಕಟ ರಂಗ 3
******