Showing posts with label ಜಯ ಜಯ ಕೃಪಾಂಬುಧಿಯೆ ಜಯ ಸುಗುಣ devapura lakshmikanta. Show all posts
Showing posts with label ಜಯ ಜಯ ಕೃಪಾಂಬುಧಿಯೆ ಜಯ ಸುಗುಣ devapura lakshmikanta. Show all posts

Monday, 2 August 2021

ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ankita devapura lakshmikanta

ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ಶರನಿಧಿಯೆ

ಜಯತು ಸಂಶ್ರುತನಿಧಿಯೆ ವಿಮಳ ಸುಧಿಯೇ ಪ


ಜಯ ಸಮಸ್ತೋಪಧಿಯೆ ಜಯ ಸರ್ವಧೀಮತೆಯೇ

ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ಅ.ಪ


ಶ್ರುತಿ ನುತಿ ಪ್ರಖ್ಯಾತೆ ನತ ನಿರ್ಜಿತ ವ್ರಾತೆ

ಸತತ ಸತ್ಸಮಿತೆ ವರಸೌಖ್ಯಪ್ರದಾತೇ

ರತಿಪತಿಪಿತ ಪ್ರೀತೆ ರತುನಕರ ಸಂಜಾತೆ

ನುತಿಸಲೆನ್ನಳವೆ ನಿನ್ನನು ಲೋಕಮಾತೆ 1


ವಿಗಡವಿಶ್ರುತ ಮಾಯೆ ತ್ರಿಗುಣಾನ್ವಿತ ವಿದಾಯೆ

ನಿಗಮ ನಿರುತೋಪಾಯೆ ನಿತ್ಯೆ ನಿರಪಾಯೆ

ಜಗನ್ಮೋಹನೆ ಕಾಯೆ ಅಗಣಿತೋಪಮದಾಯೆ

ಪೊಗಳಲೆನ್ನಳವೆ ನಿನ್ನನು ಲೋಕಮಾತೆ2


ಪರಮ ಶಕ್ತಿಗುಣಾಢ್ಯೆ ನಿರುತಾಗಮಾವೇದ್ಯೆ

ಸ್ಮರನ ಪೆತ್ತತಿ ಚೋದ್ಯೆ ಸೌಖ್ಯ ಪ್ರದಾದ್ಯೆ

ಸುರನಗರದಧಿನಾಥ ವರಲಕ್ಷ್ಮೀಕಾಂತನಾ

ಅರಸಿ ಸಿರಿಮಾಲಕ್ಷ್ಮಿ ಭವರೋಗ ವೈದ್ಯೇ 3

****