Showing posts with label ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ venkatakrishna. Show all posts
Showing posts with label ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ venkatakrishna. Show all posts

Tuesday 1 June 2021

ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ ankita venkatakrishna

 by yadugiriyamma 

ಶ್ರೀಹರಿಸ್ತುತಿ by yadugiriyamma


ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ

ಪುಂಡರೀಕಾಕ್ಷ ವಿಷ್ಣುಪಾದವ ಪ


ಮಗಧನಾ ದೇಶದಲ್ಲಿ ಚಂಪಕಾರಣ್ಯದಲ್ಲಿ ಮಧುವನದ

ಮಧ್ಯದಿನಿಂದ ಮದನನಯ್ಯನ ಪಾದವ 1


ಶ್ರೇಷ್ಠ ಗಯಾಸುರನ ಶಿರವ ಮೆಟ್ಟಿ ಅವನ ದರ್ಪವ

ನಷ್ಟವನ್ನು ಮಾಡಿದ ಸೃಷ್ಟಿಗೀಶ್ವರನ ಪಾದವ 2


ಪುಂಡರೀಕಾಕ್ಷನಾಗಿ ಗದಾಧರ ಜನಾರ್ದನ ಅವನ

ಮಂಡೆಯನ್ನು ತುಳಿದ ಭೂಮಂಡಲಾಧಿಪನ ಪಾದವ 3


ಬೇಡಿಕೊಳ್ಳಲು ಅಂದು ಗಯನು ಬಂದು ಅವನ ಶಿರದ ಮೇಲೆ

ಪಿಂಡವಿಟ್ಟವರ ಪಿತೃಗಳಿಗೆ ಆನಂದಲೋಕವೀವ ಪಾದವ 4


ಅರುಣ ಉದಯದಲ್ಲಿ ಎದ್ದು ಪರಮಭಕ್ತರೆಲ್ಲ ಮಿಂದು

ಹರಿಗೆ ಅಭಿಷೇಕ ಮಾಡಿ ಭರದಿ ಭಜನೆ ಮಾಳ್ಪ ಪಾದವ 5


ಸಾಸಿರನಾಮದಿಂದ ಉಲ್ಲಾಸದಿ ಪೂಜಿಸಿ ಜನರು

ಲೇಸಾಯಿತೆಂದು ಪೋಪ ಈಶನ ಪಾದವ 6


ಸಂಧ್ಯಕಾಲದಲ್ಲಿ ಹರಿಗೆ ಗಂಧಮಾಲೆಯನ್ನು ಧರಿಸೀ ಸು

ಗಂಧವಾದ ತುಳಸಿ ಸುತ್ತಲು ಗೋವಿಂದನ ಶ್ರೀಪಾದವ 7


ಧರಣಿಯನಾಳಿದ ಪಾದ ಘಣಿಯಮೇಲೆ ನಲಿದ ಪಾದ

[ಸಿರಿ] ದ್ಯುಮಣಿಕೋಟಿಕಾಂತಿ ಪಾದ ಫಲ್ಗುನೀತೀರದಿನಿಂದ ಪಾದ 8


ವಜ್ರಾಂಕುಶಧ್ವಜ ಪದ್ಮರೇಖೆಗಳುಳ್ಳ ಮುದ್ದುವೇಂಕಟನ ಪಾದ

[ಸಜ್ಜನರಿಗೆ ] ಮುಕ್ತಿಯನ್ನು ಕೊಡುವ ಪಾದವ 9

*****