Showing posts with label ಕೋಲು ಕಾಮನ ಗೆದ್ದ ಕೋಲು prasannavenkata. Show all posts
Showing posts with label ಕೋಲು ಕಾಮನ ಗೆದ್ದ ಕೋಲು prasannavenkata. Show all posts

Tuesday, 19 November 2019

ಕೋಲು ಕಾಮನ ಗೆದ್ದ ಕೋಲು ankita prasannavenkata

ಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದ
ಕೋಲು ಆನಂದಮುನಿ ಪಿಡಿದಿಹ ಕೋಲೆ ||pa||

ತಮನೆಂಬುವನ ಕೊಂದು ಕಮಲಜನಿಗೆ ವೇದ
ಕ್ರಮದಿಂದ ಕೊಟ್ಟು ಜಗವನು ಕೋಲೆ
ಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದ
ವಿಮಲ ಶ್ರೀ ಮತ್ಸ್ಯ ಮನೆದೈವ ಕೋಲೆ ||1||

ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆ
ಗಿರಿಗಹಿ ಸುತ್ತಿ ಕಡೆಯಲು ಕೋಲೆ
ಗಿರಿಗಹಿ ಸುತ್ತಿ ಕಡೆಯಲು ನಗ ಜಾರೆ
ಧರಿಸಿದ ಶ್ರೀ ಕೂರ್ಮ ಮನೆದೈವ ಕೋಲೆ ||2||

ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆ
ಮಂಗಳಮಹಿಮ ದಯದಿಂದ ಕೋಲೆ
ಮಂಗಳ ಮಹಿಮ ದಯದಿಂದ ನೆಗಹಿದ್ಯ
ಜ್ಞಾನoಗ ಶ್ರೀವರಾಹ ಮನೆದೈವ ಕೋಲೆ ||3||

ಒಂದೆ ಮನದೊಳಂದು ಕಂದ ನೆನೆಯಲಾಗ
ಬಂದವನಯ್ಯನ್ನೊದೆದನು ಕೋಲೆ
ಬಂದವನಯ್ಯನ್ನೊದೆದನು ಅನಿಮಿತ್ತ
ಬಂಧು ನರಹರಿಯು ಮನೆದೈವ ಕೋಲೆ ||4||

ಎದುರಿಲ್ಲವೆನಗೆಂದು ಮದವೇರಿದವನ ತ್ರಿ
ಪದ ಭೂಮಿ ಬೇಡಿ ಗೆಲಿದನು ಕೋಲೆ
ಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮ
ಮುದದ ವಾಮನ ಮನೆದೈವ ಕೋಲೆ ||5||

ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತ
ನಿಜ ತಾತನಾಜ್ಞ ಸಲಹಿದ ಕೋಲೆ
ನಿಜ ತಾತನಾಜ್ಞ ಸಲಹಿದ ಶುಭಗುಣ
ದ್ವಿಜರಾಮ ನಮ್ಮ ಮನೆದೈವ ಕೋಲೆ ||6||

ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿ
ಕೌಶಿಕ ಕ್ರತುವ ಕಾಯ್ದನು ಕೋಲೆ
ಕೌಶಿಕ ಕ್ರತುವ ಕಾಯ್ದ ರಾವಣಾಂತಕ
ಶ್ರೀ ಸೀತಾರಾಮ ಮನೆದೈವ ಕೋಲೆ||7||

ಗೋಕುಲದಲಿ ಬೆಳೆದು ಪೋಕ ದನುಜರ ಅ
ನೇಕ ಪರಿಯಲಿ ಸದೆದನು ಕೋಲೆ ಅ
ನೇಕ ಪರಿಯಲಿ ಸದೆದ ಪಾಂಡವಪಾಲ
ಶ್ರೀಕೃಷ್ಣ ನಮ್ಮ ಮನೆದೈವ ಕೋಲೆ ||8||

ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿ
ಸತ್ಯವಾದಿಗಳ ಪೊರೆದನು ಕೋಲೆ
ಸತ್ಯವಾದಿಗಳ ಪೊರೆದನು ಅಜವಂದ್ಯ
ಕರ್ತ ಬೌದ್ಧನು ಮನೆದೈವ ಕೋಲೆ ||9||

ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆ
ಸುಹಯವೇರಿ ಕಲಿಯನು ಕೋಲೆ
ಸುಹಯವೇರಿ ಕಲಿಯನೆಳೆದು ಕೊಂದ
ಮಹಾಕಲ್ಕಿ ನಮ್ಮ ಮನೆದೈವ ಕೋಲೆ ||10||

ಹತ್ತವತಾರದಿ ಭಕ್ತಜನರ ಹೊರೆದ
ಮತ್ತಾವಕಾಲದಿ ರಕ್ಷಿಪ ಕೋಲೆ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸುಖಿಯಾದೆ ಕೋಲೆ||11||
***

kOlu kAmana gedda kOlu mAygaLanodda
kOlu Anandamuni piDidiha kOle ||pa||

tamaneMbuvana kondu kamalajanige vEda
kramadinda koTTu jagavanu kOle
kramadinda koTTu jagavanu rakShisida
vimala SrI matsya manedaiva kOle ||1||

surapana viBavella SaradhIli muLugire
girigahi sutti kaDeyalu kOle
girigahi sutti kaDeyalu naga jAre
dharisida SrI kUrma manedaiva kOle ||2||

hongaNNinavanu BUvengaLaneLedoyye
mangaLamahima dayadiMda kOle
mangaLa mahima dayadinda negahidya
jnangaa SrIvarAha manedaiva kOle ||3||

onde manadoLandu kanda neneyalAga
bandavanayyannodedanu kOle
bandavanayyannodedanu animitta
bandhu narahariyu manedaiva kOle ||4||

edurillavenagendu madavEridavana tri
pada BUmi bEDi gelidanu kOle
pada BUmi bEDi gelidA trivikrama
mudada vAmana manedaiva kOle ||5||

kujanaraLidu BAgya sujanarigoliditta
nija tAtanAj~ja salahida kOle
nija tAtanAj~ja salahida SuBaguNa
dvijarAma namma manedaiva kOle ||6||

kausalye garBadi janisida kRupeyalli
kauSika kratuva kAydanu kOle
kauSika kratuva kAyda rAvaNAMtaka
SrI sItArAma manedaiva kOle ||7||

gOkuladali beLedu pOka danujara a
nEka pariyali sadedanu kOle a
nEka pariyali sadeda pAMDavapAla
SrIkRuShNa namma manedaiva kOle ||8||

mithyAvAdigaLige mithyavane kalisi
satyavAdigaLa poredanu kOle
satyavAdigaLa poredanu ajavaMdya
karta bauddhanu manedaiva kOle ||9||

svAhA svadhAkAravu mahiyoLilladAge
suhayavEri kaliyanu kOle
suhayavEri kaliyaneLedu konda
mahAkalki namma manedaiva kOle ||10||

hattavatAradi Baktajanara horeda
mattAvakAladi rakShipa kOle
mattAva kAladi rakShipa prasanvenkaTa
kartana naMbi suKiyAde kOle ||11||
***

by ಪ್ರಸನ್ನವೆಂಕಟದಾಸರು
ಕೋಲುಹಾಡುಕೋಲು ಕಾಮನ ಗೆದ್ದ ಕೋಲು ಮಾಯ್ಗಳನೊದ್ದಕೋಲು ಆನಂದಮುನಿ ಪಿಡಿದಿಹ ಕೋಲೆ ಪ.

ತಮನೆಂಬುವನ ಕೊಂದು ಕಮಲಜನಿಗೆ ವೇದಕ್ರಮದಿಂದ ಕೊಟ್ಟು ಜಗವನು ಕೋಲೆಕ್ರಮದಿಂದ ಕೊಟ್ಟು ಜಗವನು ರಕ್ಷಿಸಿದವಿಮಲ ಶ್ರೀಮತ್ಸ್ಯಮನೆದೈವ ಕೋಲೆ1

ಸುರಪನ ವಿಭವೆಲ್ಲ ಶರಧೀಲಿ ಮುಳುಗಿರೆಗಿರಿಗಹಿ ಸುತ್ತಿ ಕಡೆಯಲು ಕೋಲೆಗಿರಿಗಹಿ ಸುತ್ತಿ ಕಡೆಯಲುನಗಜಾರೆಧರಿಸಿದ ಶ್ರೀಕೂರ್ಮಮನೆದೈವ ಕೋಲೆ2

ಹೊಂಗಣ್ಣಿನವನು ಭೂವೆಂಗಳನೆಳೆದೊಯ್ಯೆಮಂಗಳಮಹಿಮ ದಯದಿಂದ ಕೋಲೆಮಂಗಳ ಮಹಿಮ ದಯದಿಂದ ನೆಗಹಿದ್ಯಜ್ಞಾಂಗ ಶ್ರೀವರಾಹ ಮನೆದೈವ ಕೋಲೆ 3

ಒಂದೆ ಮನದೊಳಂದು ಕಂದ ನೆನೆಯಲಾಗಬಂದವನಯ್ಯನ್ನೊದೆದನು ಕೋಲೆಬಂದವನಯ್ಯನ್ನೊದೆದನು ಅನಿಮಿತ್ತಬಂಧು ನರಹರಿಯು ಮನೆದೈವ ಕೋಲೆ 4

ಎದುರಿಲ್ಲವೆನಗೆಂದು ಮದವೇರಿದವನ ತ್ರಿಪದ ಭೂಮಿ ಬೇಡಿ ಗೆಲಿದನು ಕೋಲೆಪದ ಭೂಮಿ ಬೇಡಿ ಗೆಲಿದಾ ತ್ರಿವಿಕ್ರಮಮುದದ ವಾಮನ ಮನೆದೈವ ಕೋಲೆ 5

ಕುಜನರಳಿದು ಭಾಗ್ಯ ಸುಜನರಿಗೊಲಿದಿತ್ತನಿಜ ತಾತನಾಜÕ ಸಲಹಿದ ಕೋಲೆನಿಜ ತಾತನಾಜÕ ಸಲಹಿದ ಶುಭಗುಣದ್ವಿಜರಾಮ ನಮ್ಮ ಮನೆದೈವ ಕೋಲೆ 6

ಕೌಸಲ್ಯೆ ಗರ್ಭದಿ ಜನಿಸಿದ ಕೃಪೆಯಲ್ಲಿಕೌಶಿಕಕ್ರತುವ ಕಾಯ್ದನು ಕೋಲೆಕೌಶಿಕಕ್ರತುವ ಕಾಯ್ದ ರಾವಣಾಂತಕಶ್ರೀ ಸೀತಾರಾಮ ಮನೆದೈವ ಕೋಲೆ 7

ಗೋಕುಲದಲಿ ಬೆಳೆದುಪೋಕದನುಜರ ಅನೇಕ ಪರಿಯಲಿ ಸದೆದನು ಕೋಲೆ ಅನೇಕ ಪರಿಯಲಿ ಸದೆದ ಪಾಂಡವಪಾಲಶ್ರೀಕೃಷ್ಣ ನಮ್ಮ ಮನೆದೈವ ಕೋಲೆ 8

ಮಿಥ್ಯಾವಾದಿಗಳಿಗೆ ಮಿಥ್ಯವನೆ ಕಲಿಸಿಸತ್ಯವಾದಿಗಳ ಪೊರೆದನು ಕೋಲೆಸತ್ಯವಾದಿಗಳ ಪೊರೆದನು ಅಜವಂದ್ಯಕರ್ತಬೌದ್ಧನು ಮನೆದೈವ ಕೋಲೆ9

ಸ್ವಾಹಾ ಸ್ವಧಾಕಾರವು ಮಹಿಯೊಳಿಲ್ಲದಾಗೆಸುಹಯವೇರಿ ಕಲಿಯನು ಕೋಲೆಸುಹಯವೇರಿ ಕಲಿಯನೆಳೆದು ಕೊಂದಮಹಾಕಲ್ಕಿ ನಮ್ಮ ಮನೆದೈವ ಕೋಲೆ 10

ಹತ್ತವತಾರದಿ ಭಕ್ತಜನರ ಹೊರೆದಮತ್ತಾವಕಾಲದಿ ರಕ್ಷಿಪ ಕೋಲೆಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟಕರ್ತನ ನಂಬಿ ಸುಖಿಯಾದೆ ಕೋಲೆ 11
***