Showing posts with label ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ gurumahipati. Show all posts
Showing posts with label ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ gurumahipati. Show all posts

Wednesday, 1 September 2021

ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ ಪ 


ಸ್ನಾನ ಸಂಧ್ಯಾದಿ ಮೌನ ವಿಡದು ಅನು | ಷ್ಠಾನ ಜಪವ ಮಾಡಲಿ ಕುಳಿತರೆ | ತಾನಾಗ ಹೊರಡುತಲಿ ತಿರಗÀುತ | ನಾನಾ ದುರ್ವಿಷಯದಲಿ ತಂದು ಮಹಾನಿದ್ರೆ ಒಡ್ಡುತಲಿ1 

ಘಾಸಿ ಬಡುವರೆಂಬ | ದೀ ಶಾಸ್ತ್ರಗಳ ಬಲ್ಲದು ಸದ್ಗುಣ | ಧ್ಯಾಸ ವೆಂದಿಗು ಮಾಡದು ದುವ್ರ್ಯತ್ತಿ | ಹೇಸದಾ ಚರಿಸುವದು2 

ಆವಗತಿಯೋ ಯೆನಗಾವ ಜನುಮವೋ | ಆವಬವಣೆಯಂಬುದು ತಿಳಿಯದು | ದೇವನೇ ಸಲಹುವದು ಮನ | ವಿವೇಕದಿ ತಿದ್ದುವದು | ಗುರು ಮಹಿಪತಿ ಸುತಗೊಲಿದು 3

***