ಕಾಖಂಡಕಿ ಶ್ರೀ ಕೃಷ್ಣದಾಸರು
ಮೋಕ್ಷವಿಲ್ಲಾ | ಗುರು ಕೃಪೆ ವಿನಾ ಪ
ಮಾನ್ಯ ಸ್ವದೇಶದಿ ಧನ್ಯ ವಿದೇಶದ | ಉನ್ನತ ಕುಲದುತ್ಪನ್ನ ನೋಡಲು | ಸನ್ನುತ ಕರ್ಮಗಳನ್ನಸುವ ಸಂ | ಪನ್ನನು ಗುಣದಲಿ ಮುನ್ನಾಗೇನು 1
ಪುಸ್ತಕ ಹಿಡಿಯಲು ವಸ್ತು ಬೃಹಸ್ಪತಿ | ವಿಸ್ತರಿಸ್ಹೇಳುವ ಶಾಸ್ತ್ರದರ್ಥವ | ದುಸ್ತರ ಯೋಗದ ನಿಸ್ತರಿಸುವ ಘನ | ಪ್ರಸ್ತುತ ತಪಸಭ್ಯಸ್ತ್ರಾಗೇನು 2
ಸುಂದರಿ ಮಾನಿನಿಗೊಂದೇ ಮಂಗಳ | ಹೊಂದದೇ ಆಭರಣೆಂದೇನು ಫಲ | ಇಂದಿರೆ ಪತಿ-ವಲುವಂದದಿ ಭಾವದಿ | ತಂದೆ ಮಹಿಪತಿಗೊಂದಿಸದನಕಾ 3
***