Showing posts with label ವ್ಯಾಸಮುನಿರಾಯರಾ ದಾಸ gurupurandara vittala purandara dasa stutih. Show all posts
Showing posts with label ವ್ಯಾಸಮುನಿರಾಯರಾ ದಾಸ gurupurandara vittala purandara dasa stutih. Show all posts

Friday, 27 December 2019

ವ್ಯಾಸಮುನಿರಾಯರಾ ದಾಸ gurupurandara vittala purandara dasa stutih

ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ).

ವ್ಯಾಸಮುನಿರಾಯರಾ ದಾಸರೊಳು ಪುರಂದರ
ದಾಸರ ಮಹಿಮೆ ವರ್ಣಿಸೆಲಾರೆನವ್ವಾ ।

ಮೂರು ಲೋಕದ ಅರಸು ಸಿರಿ ಭೂ ದುರ್ಗೆ ಸಹಿತ
ಧಾರುಣಿಯೊಳು ಮೇಲೆ ಅವತರಿಸಿ ದಯಮಾಡಿ।
ನಾರದರೇ ಇರವರೆಂದು ಪುರಂದರದಾಸರಿಗೆ
ಕಾರುಣ್ಯದಿಂದ ಕಾಣಿಸಿಕೊಂಡನವ್ವ।।

ಗಂಗೆ ಗೌತಮೆ ತುಂಗೆ ಮೊದಲಾದ ತೀರ್ಥಗಳು
ಶೃಂಗಾರವಾಗಿ ನಮ್ಮಂಗಳದೊಳಗೆ।
ರಂಗವಲ್ಲಿ ಇಕ್ಕುತಲಿ ಮಂಗಳವ ಪಾಡುವದ
ಕಂಗಳಿಂದಲಿ ಕಂಡೆ ತಂಗಿ ಕೇಳವ್ವ।

ಹರಿದಾಸರ ಉದರದಲಿ ಜನಿಸಿ ನಾನು
ಗುರುವ್ಯಾಸರಾಯರ ಚರಣಗಳ ಕಂಡೆ।
ಪರಮಸಾರ್ಥಕವಾಯಿತಿದೀಗ ನರಜನ್ಮ
ಗುರುಪುರಂದರವಿಠಲನರಿತೆಯಿವರಿಂದ।।
****
ಶ್ರೀ ಪುರಂದರದಾಸರ ಮಕ್ಕಳು, ಚಂದ್ರಾಂಶ ಸಂಭೂತರು, ವೆಂಕಟೇಶ ನಾಮಧೇಯರು, ಪರಶುಭಾಗವತರಾದ ಶ್ರೀ ಗುರುಪುರಂದರವಿಠಲರ ರಚನೆಯ ಪದ

ವ್ಯಾಸಮುನಿರಾಯರ ದಾಸರೊಳು ಪುರಂದರ-
ದಾಸರ ಮಹಿಮೆ ವರ್ಣಿಸಲಾರೆನವ್ವ ॥ ಪಲ್ಲವಿ ॥

ಮೂರುಲೋಕದ ಅರಸು ಶ್ರೀಭೂದುರ್ಗೆಯ ಸಹಿತ
ಧಾರುಣಿಯ ಮ್ಯಾಲೆ ಅವತರಿಸಿ ದಯಮಾಡಿ
ನಾರದರೆ ಯಿವರೆಂದು ಪುರಂದರದಾಸರಿಗೆ
ಕಾರುಣ್ಯದಿಂದ ಕಾಣಿಸಿಕೊಂಡನವ್ವ ॥ ೧ ॥

ಗಂಗೆ ಗೌತಮೆ ತುಂಗೆ ಮೊದಲಾದ ತೀರ್ಥಗಳು
ಶೃಂಗಾರವಾಗಿ ನಮಂಗಣದೊಳಗೆ
ರಂಗವಾಲಿಕ್ಕುತಲಿ ಮಂಗಳವ ಪಾಡುವದು
ಕಂಗಳಿಂದಲಿ ಕಂಡೆ ತಂಗಿ ಕೇಳವ್ವ ॥ ೨ ॥

ಹರಿದಾಸರ ಉದರದಲಿ ಜನಿಸಿನಾನು
ಗುರುವ್ಯಾಸರಾಯರ ಚರಣಗಳ ಕಂಡೆನೊ
ಪರಮ ಸಾರ್ಥಕವಾಯಿತೀ ದೇಹ ನರಜನ್ಮ
ಗುರುಪುರಂದರವಿಠಲನರಿತೆಯಿವರಿಂದ ॥ ೩ ॥

ಶ್ರೀ ಗುರುಪುರಂದರವಿಠಲರು ತಮ್ಮ ತಂದೆಯವರಾದ ಶ್ರೀ ಪುರಂದರದಾಸಾರ್ಯರ ಕುರಿತಾಗಿ ದಾಖಲಿಸಿದ ವಿಷಯಗಳು

ಶ್ರೀಮಚ್ಚಂದ್ರಿಕಾರ್ಯರ ಶಿಷ್ಯರಲ್ಲಿ ಶ್ರೇಷ್ಠರಾದ ಶ್ರೀ ಪುರಂದರದಾಸಾರ್ಯರ ಮಹಿಮೆಯನ್ನು ವರ್ಣಿಸಲಸಾಧ್ಯವೆನ್ನುತ್ತಾರೆ.

ನಾರದರು ಶ್ರೀ ಪುರಂದರದಾಸರಾಗಿ ಬಂದುದಕೆ ವರವಿತ್ತ ಜಗದೊಡೆಯನಾದ ಶ್ರೀಹರಿಯೂ ಶ್ರೀಭೂದುರ್ಗೆಯರೊಡಗೂಡಿ ಬಂದು ದಾಸರ ಮುಂದೆ ಸದಾ ಕಾಣಿಸಿಕೊಳ್ಳುತ್ತ , ಅವರು ಪಾಡುವ ಕೃತಿಗಳಿಗೆ ನರ್ತಿಸುತ್ತಿದ್ದನು.

ಗಂಗೆ ಮೊದಲಾದ ತೀರ್ಥಾಭಿಮಾನಿ ದೇವತೆಗಳು ಅಲಂಕೃತರಾಗಿ ಶ್ರೀ ದಾಸರ ಅಂಗಳದಲ್ಲಿ ರಂಗವಲ್ಲಿಗಳನ್ನು ಹಾಕುತ್ತ, ಮಂಗಳವನ್ನು ಪಾಡುತ್ತಿದ್ದದ್ದನ್ನು ಶ್ರೀ ಗುರುಪುರಂದರರು ಕಣ್ಣಾರೆ ಕಂಡದ್ದನ್ನು ದಾಖಲಿಸಿದ್ದಾರೆ.

ಈ ಮಹಾನುಭಾವರಾದ ಶ್ರೀ ಪುರಂದರರ ಉದರದಲ್ಲಿ ಜನಿಸಿದ ಕಾರಣ ಪ್ರಲ್ಹಾದಾವತಾರಿಗಳಾದ ಶ್ರೀ ವ್ಯಾಸರಾಯರ ಚರಣಗಳ ಕಂಡೆನೊ (ನೋಡಿ ಇಲ್ಲಿ ಎಷ್ಟು ವಿನಯವಿದೆ - ಹಿರಿಯರ ಕುರಿತು ಜ್ಞಾನಿಗಳ ಕುರಿತು ಹೇಳುವಾಗ ಅವರನ್ನು ನೋಡಿ ಬಂದೆ, ಅವರ ಭೇಟಿ ಆಗಿದೆ ಹೀಗೆಲ್ಲ ಹೇಳಬಾರದು ಎನ್ನುವುದನ್ನು ತೋರಿಸಿಕೊಡ್ತಾರೆ)
ಹೀಗೆ  ಶ್ರೀ ಪುರಂದರದಾಸರ ಉದರದಲಿ ಜನಿಸಿದಬಂದ ಕಾರಣ ಶ್ರೀ ವ್ಯಾಸರಾಯರ ಶಿಷ್ಯತ್ವದಲ್ಲಿದ್ದ ಕಾರಣ, ಈ ನರಜನ್ಮ ಪರಮ ಧನ್ಯವಾಯಿತೆಂದು ಹೇಳುತ್ತ, ಆದ್ದಕಾರಣದಿಂದಲೆ ಗುರುಪುರಂದರವಿಠಲನರಿತೆಯಿವರಿಂದ ಅಂತಾರೆ - ಆ ಮಹಾನುಭಾವರುಗಳಿಂದಲೆ ಪರಮಾತ್ಮನನ್ನು - ಎಲ್ಲರ ಗುರುವಾದ ಪರಮಾತ್ಮನನ್ನು ಕಾಣುವ ಭಾಗ್ಯ ದೊರಕಿತೆಂದು ತಿಳಿಸಿ ಪುಳಕಿತರಾಗುತ್ತಾರೆ.

ಜೈ ವಿಜಯರಾಯ
smt. Padma Sirish
ನಾದನೀರಾಜನದಿಂ ದಾಸಸುರಭಿ. 🙏🏽
****