Showing posts with label ಬದುಕಿದೆನು ಬದುಕಿದೆನು vijaya vittala ankita suladi ಉಡುಪಿ ಮಹಿಮಾ ಸುಳಾದಿ BADUKIDENU BADUKIDENU UDUPI MAHIMA SULADI. Show all posts
Showing posts with label ಬದುಕಿದೆನು ಬದುಕಿದೆನು vijaya vittala ankita suladi ಉಡುಪಿ ಮಹಿಮಾ ಸುಳಾದಿ BADUKIDENU BADUKIDENU UDUPI MAHIMA SULADI. Show all posts

Saturday, 1 May 2021

ಬದುಕಿದೆನು ಬದುಕಿದೆನು vijaya vittala ankita suladi ಉಡುಪಿ ಮಹಿಮಾ ಸುಳಾದಿ BADUKIDENU BADUKIDENU UDUPI MAHIMA SULADI


Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ  ಉಡುಪಿ ಮಹಿಮಾ ಸುಳಾದಿ 

 ರಾಗ:ಕಲ್ಯಾಣಿ 
ಕಾಶೀತಲೇ ಕೃತಪದಾsಪಿ ಸರಿತ್ ಸುರಾಣಾಂ
ಮಾಯಾತಿ ಯದ್ತಪವಿತ್ರಸರೋಧುನಾsಪಿ ।
ರುದ್ರಾದಿದೇವಗಣಸೇವಿತಸರ್ವಭಾಗಂ
ತದ್ರೂಪ್ಯಪೀಠಪುರಮಪ್ರತಿಮಂ ತ್ರಿಲೋಕ್ಯಾಮ್ ॥

 ಧೃವತಾಳ 

ಬದುಕಿದೆನು ಬದುಕಿದೆನು ಬಲುಜನ್ಮದ ಪುಣ್ಯ 
ಒದಗಿತೆನಗಿಂದು ಗುರುಗಳ ದಯದಿಂದ 
ಸದಮಲ ನಾನಾದೆ ಸತತ ಮಾಡಿದದುರಿತ 
ಉದಧಿ ಬತ್ತಿತು ಕಲ್ಯಾದಿಗಳು ನೋಡಿ 
ಎದೆ ಒಡದು ಎತ್ತಪೋಗುವೆವೆಂದು ಯೋಚಿಸಿ 
ಗದಗದನೆ ನಡುಗಿ ಭಯವೆ ಪೊಂದಿಪ್ಪರು 
ತ್ರಿದಶರೆಲ್ಲರು ನೆರದು ತಮತಮ್ಮೊಳು ಕುಣಿದಾಡಿ 
ಪದೊ ಪದೆಗೇ ಮಹೋತ್ಸವದಲ್ಲಿಪ್ಪರು 
ಇದೆ ಸತ್ಯ ಎನ್ನ ನೂರೊಂದು ಕುಲಗೋತ್ರಜರು 
ಮುದದಿಂದ ಗತಿಗಭಿ ಮೊಗವಾದರೂ 
ಬೆದರಲ್ಯಾತಕೆ ಇನ್ನು ಮುಂದಿನ ಜನನಕ್ಕೆ 
ಯದು ಕುಲೇಶನ ದಿವ್ಯ ಪಾದಗಳೆಂಬೊ 
ನಿಧಿಯು ದೊರಕಿದ ಮೇಲೆ ಆದನಾದರು ಪೋಗಿ 
ಉದರಕ್ಕೆ ಎಂಜಲೆಡೆ ಶೋಧಿಸುವನೆ 
ಹದುಳವೇ ಸರಿ ಇಲ್ಲಿ ಲೇಶಕ್ಲೇಶವು ಇಲ್ಲ 
ಎದುರಿಲ್ಲ ಉಡುಪಿನ ಶ್ರೀ ಯಾತ್ರೆಗೆ 
ಪದವಿಯಲ್ಲಿ ಇದ್ದ ಸುಖಕಿಂತ ಇಲ್ಲಿಯ ಸುಖ 
ಅಧಿಕವಾಗಿದೆ ನೋಡು ಎಲೊ ಮನವೇ 
ಹೃದಯಾಂಬರ ನಿವಾಸ ವಿಜಯವಿಠಲ ಕೃಷ್ಣನ 
ಪದಗಳ ನಂಬಿದ ವಿದುರನಭಾಗ್ಯವ ನೋಡು ॥೧॥

 ಮಟ್ಟತಾಳ 

ಹರಿದಾಸರ ಸಂಗ ಹರಿಕಥಾ ಪ್ರಸಂಗ 
ಹರಿನಾಮಾಮೃತ ಹರಿಯ ಪಾಡಿದ ಗೀತ 
ಹರಿಯ ಮನನ ಧ್ಯಾನ ಹರಿಯ ಸಂದರುಶನ 
ಹರಿಸ್ತುತಿ ವಂದನೆ ಹರಿಯ ಪಾದಾರ್ಚನೆ 
ಹರಿ ಪಾದೋದಕ ಹರಿಗುಣಿಸಿದ ಶಾಕ 
ಪರಿ ಪರಿ ಓದನ ಪರಿಮಿತ ಸಾಧನ 
ಧರೆಯೊಳಗಿಲ್ಲದಾಶ್ಚರ್ಯವಾಯಿಂದಿನಲಿ 
ನಿರೀಕ್ಷಿಸಿದೆ ಎನಗೆ ದೊರಕಿತು ಬಲು ಲಾಭಾ 
ಪರಮ ಪುರುಷ ಕೃಷ್ಣ ವಿಜಯವಿಠಲ ಹರಿಯಾ 
ಕರುಣದಳತೆಯನ್ನು ಅರಿತವರಾರಯ್ಯ ॥೨॥

 ತ್ರಿವಿಡಿತಾಳ 

ದುರನ್ನ ದುಷ್ಟ ಪರಿಗ್ರಹ ದುಸ್ಸಂಗ ದುರಾಚಾರ
ದುರ ವಾಕ್ಯ ದುಶ್ಚಿತ್ತಾ ದುರಾಶೆಯು ನಿರುತಬಿಡದೆ ಆ-
ಚರಿಸಿದ ಮನುಜಂಗೆ ಸುರರ ಸೇವಿಪಯಾತ್ರೆ 
ದೊರೆತಾದೇನು ಮನವೆ ಹಿರಿದು ಜನ್ಮಾದಿ ನಮ್ಮ 
ಹಿರಿಯರು ಪುಣ್ಯವಂತರು ಕಾಣೊ ಇದನೆಲ್ಲ 
ಹರಿಬಲ್ಲನೊ ಬರಿದಾಗದು ಮತ್ತೆ 
ಗುರುಗಳ ಕೃಪೆ ವಿಸ್ತರವಾಗಿದಿದಕಿದೆ ಗುರುತು ಕಾಣೊ 
ಸುರಗಂಗೆ ಮೊದಲಾದ ಸರಿತು ಸೇತು ಎಲ್ಲ 
ತಿರುಗಿದ ಫಲಂಗಳಮರುತಾ ದೇವನಿಂದ 
ಹರಿತಾನೆ ಕೈಕೊಂಡು ಕರುಣಿಸಲದರಿಂದ
ಮೆರೆವ ವೈಕುಂಠಕ್ಕೆ ಸರಿಯಾದಾಜಾರಂಣ್ಯ 
ಪುರದ್ಯಾತ್ರಿ ಫಲಸಿತೋ ಭರದಿಂದ ದಾಸರ 
ಪೊರೆವ ಪುರುಷೋತ್ತಮ ಸರಿಸಾದಲ್ಲಿ 
ಇರಳು ಹಗಲು ಇಪ್ಪ ಉಡುಪಿನ ಕೃಷ್ಣನ್ನ 
ಸ್ಮರಣೆ ಮಾಡಿದ ಪುಣ್ಯಕ್ಕೆ ಸರಿಯಾವದೂ 
ದುರುಳರಿಗತಿ ದೂರಾ ವಿಜಯವಿಠಲರೇಯಾ 
ಎರವು ಮಾಡದೆ ಕಾವಾ ಕರದು ಕಳೆವನೋವ ॥೩॥

 ಅಟ್ಟತಾಳ 

ನಿರ್ಮಾಲ್ಯ ವಿಸರ್ಜನೆ ಬೆಳಗಿನ ಪೂಜೆ 
ಪರಮ ಪಂಚಾಮೃತ ಉದ್ವಾರ್ಚನೆ ಪೂಜೆ 
ಶರತ್ಕಾಲ ಚಂದ್ರನ ಸೋಲಿಪ ಬೆಣ್ಣೆ ಸಕ್ಕರಿ ನೈವೇದ್ಯ ಸುಂ-
ದರ ತೀರ್ಥ ಪೂಜೆ ವಿಚಿತ್ರಲಂಕಾರವ 
ಸರಪೂಜೆ ಮಹಪೂಜೆ ಮಹಪೂಜೆ ಈ ಬಗೆ ನವ ವಿಧ 
ಮರುತವತಾರ ಮಧ್ವಮುನಿಗಳಂದು 
ವಿರಚಿಸಿ ಪೂಜಿಮಾಡಿದ ಸಂಭ್ರಮವೊ 
ವರಸತ್ವ ಸ್ಥಳವಿದು ಭಕುತಿಯಿಂದಲಿ ಬಂದು 
ಎರಗಿವಂದೆ ಸಾರಿ ಕೊಂಡಾಡಿ ಕೊಂಡಾಡಿ ತೃಣ ಮಾ-
ತುರದಿಂದ ಯತಿಗಳ ಕರವಿಂದಾರಾಧನೆ 
ಹರುಷದಿಂದಲಿ ನೋಡೆ ಮುಂದೆ ಆ ಮನುಜನು 
ದುರಿತಕ್ಕೆ ಬೀಳನು ಹರಿಕಾವುತಲಿಪ್ಪ 
ನಿರುಯಾದೂರನು ಪುಣ್ಯತೊಲಗದೆ ಇಹನೂ 
ಧರಧರವರ್ಣಾ ವಿಜಯವಿಠಲ ಕೃಷ್ಣಾ 
ಪರಣನಾಗಿ ಸಾಕುವ ಕೇಳು ಮನವೆ ॥೪॥

 ಆದಿತಾಳ 

ಷಡುರಸ ಕೂಡಿದ ಮಹಾಪ್ರಸಾದವೆ ಉಳ್ಳ 
ಎಡೆಯ ಕಣ್ಣಿನಿಂದ ಕಂಡಾಗಲೇ ದೋಷ 
ಸುಡುವದು ಶುದ್ಧ ಬಹುಭಕುತಿ ಕೊಡುವದು 
ತಡಿಯಾದೆ ಅಡಿಗಡಿಗೆ ಹರಿನಾಮಾ 
ನುಡಿಸುವದು ಜ್ಞಾನಾದಲ್ಲಿ 
ಒಡನೆ ವೊಂದು ತುತ್ತುಕೊಂಡವನ ಭಾಗ್ಯಕ್ಕೆ 
ಕಡೆಗಾಣಿ ಲೋಕದೊಳಗವನೆ ಮಹಾಧನ್ಯನು 
ಒಡಲಾ ತುಂಬ ಮೆದ್ದವಗೆ ವರಗಳ ಹರಿ ಏನು 
ಕೊಡಲಿ ಎಂದು ತನ್ನ ಸತಿಯ ಕೂಡಾಡುವ 
ಪಡಿಗಾಣೆ ಭಾರ್ಗವ ಕ್ಷೇತ್ರದೊಳಿದಕೆಲ್ಲಿ 
ಉಡುಪಿ ಎಂದೆನಿಸಿತು ಚಂದ್ರನ್ನ ದೆಶೆಯಿಂದ 
ದೃಢವಾಗಿ ಇದ್ದು ಮನವೆ ಯಾತ್ರಿಯ ಪೂರೈಸು 
ಬಿಡನು ಯಾದವ ಕೃಷ್ಣ ಅನಂತ ಜನುಮಕ್ಕೆ 
ಪೊಡವಿರಮಣ ನಮ್ಮ ವಿಜಯವಿಠಲರೇಯ 
ಜಡಮತಿಗಾದರು ತನ್ನವನೆನಿಸುವ ॥೫॥

 ಜತೆ 

ಬೀಜ ಯಾತ್ರೆ ಇದು ಕರ್ಮದ ಘಸಣಕ್ಕೆ 
ತೇಜೋಮಯ ಕೃಷ್ಣ ವಿಜಯವಿಠಲ ಮನವೆ ॥೬॥
*****