..
kruti by ಲಕ್ಷ್ಮೀನಾರಯಣರಾಯರು Lakshminarayanaru
ಶಂಭೋ ಅಂಬಾಮನೋಹರ ದೇವ ಮಹದೇವ ಪ
ಘನ ಗಂಭೀರ ನಂಬಿದೆ ಕಾಯೊ ವರವೀಯೋ ಅ.ಪ
ಸುರನರ ಭುಜಂಗ ಸಂಸೇವ್ಯ ಸುಭಾವ್ಯ
ಸರ್ವಕಾಂiÀರ್i ಸತತ ಸಹಾಯ
ಧೀರ ಅಘೋರ ರಿಪು ಸಂಹಾರ
ಉದಾರ ದಾತಾರ ದುರಿತವಿದೂರ 1
ವರದೇಶ ದಿನೇಶ ಪ್ರಕಾರ
ಸರ್ವೇಶ ಕೈಲಾಸ ವರ ಗಿರಿವಾಸ
ಈಶ ಮಹೇಶ ವಿಶ್ವೇಶ ಉಮೇಶ
ದುರ್ವಾಸ ಪರಮ ವಿಲಾಸ 2
ಶರಣರ ಆಧಾರ ಪರಮಾರ್ಥ ವಿಚಾರ
ಉರಗೇಂದ್ರ ಭೂಷಿತಹಾರ
ಮಾರಸಂಹಾರ ಭವದೂರ ಉದ್ಧಾರ
ಶ್ರೀಕಾಂತ ಪ್ರಿಯ ಮಂದಾರ 3
***