Showing posts with label ಯಾತಕೆ ಮರುಳಾದೆಯೋ ಮನವೆ others. Show all posts
Showing posts with label ಯಾತಕೆ ಮರುಳಾದೆಯೋ ಮನವೆ others. Show all posts

Friday, 27 December 2019

ಯಾತಕೆ ಮರುಳಾದೆಯೋ ಮನವೆ others

ರಾಗ ಶಂಕರಾಭರಣ ಝಂಪೆತಾಳ

ಯಾತಕೆ ಮರುಳಾದೆಯೋ ಮನವೆ
ಏತಕೆ ಮರುಳಾದೆಯೋ
ಯಾತಕೆ ಮರುಳಾದೆ ಕಾಕುದೈವವ ನಂಬಿ
ಕಾತರಪಟ್ಟು ನೀ ನೀತಿಮಾರ್ಗವ ಬಿಟ್ಟು ||ಪ||

ಮಾರಿಯು ಮಸಣಿಯು ಕಾಯ್ವುದೆ ನಿನ್ನ
ಕೋರಿಕೆಯನು ಕೊಡಬಲ್ಲುದೆ
ಧೀರನು ನೀನಾಗಿ ಹರಿಪಾದವ ನಂಬಲು
ಆರಿಗು ತೀರದ ಮುಕುತಿಯ ಕೊಡುವನು ||೧||

ಆ ಜಾತಿ ಈ ಜಾತಿ ಎನ್ನದೆ ನೀನು
ಸೋಜಿಗವ ಪಟ್ಟು ಸಾಯದೆ
ಮೂಜಗದೀಶನ್ನ ದಾಸರ ನಂಬಲು
ಮಾಜದೆ ಜಾನದ ದಾರಿಯ ತೋರ್ಪರು ||೨||

ಏನಾಯ್ತು ಈ ಕರ್ಮಮಾರ್ಗದಿ ನೀನು
ನಾನಾ ದುಃಖವ ಪೊಂದಿದೆ
ಇನ್ನಾದರು ಶ್ರೀ ಅಚ್ಯುತನ ನೆನೆದರೆ
ಜಾನದ ತತ್ವವು ತಾನೆ ತಿಳಿವುದಲ ||
*******