ಹರಿಹರಿ ಎನ್ನದೆ ಈ ನಾಲಿಗಿ-
ನ್ನಿರುವುದ್ಯಾತಕೆ ಸುಮ್ಮನೆ ॥ಪ॥
ಸರಸಿಜಾಕ್ಷನ ದಿವ್ಯ ಸಾಸಿರನಾಮ ಬಿಟ್ಟು
ಪರರ ವಾರ್ತ್ಯೇಲಾಸಕ್ತಿ ಪಾಮರನಾಗುವುದ್ಯಾಕೆ ॥೧॥
ಕಲ್ಲು ಹಿಟ್ಟಾಗಿ ರಂಗವಾಲಿ ಎನಿಸುವುದು
ಕಲ್ಲಿಗೆ ಕಡೆಯಾದೆ ಮಲ್ಲರಂತಕಗೆ ಬ್ಯಾಗ ॥೨॥
ಮಧುರ ಪದಾರ್ಥದಲ್ಲಿ ಮನಸನಿಕ್ಕಲು ಬ್ಯಾಡ
ಮಧುವೈರಿ ಹರಿನಾಮ ಕ್ಷುಧೆಯ ಬೇಡುತಲೀಗ ॥೩॥
ಅರ್ಕಸುತನ ಭಯ ಅಂಕೆಯಿಲ್ಲದಂತಿರೆ
ಸಿಕ್ಕು ಸಿಗದಂತಿರೆ ಯುಕ್ತಿ ರಕ್ಕಸಾಂತಕನಲ್ಲಿಟ್ಟು ॥೪॥
ಈಸು ಮತ್ಯಾಕೆ ಯಶೋದೆಕೂಸಿನಾಲಾಪ್ವೊಂದಿರಲಿ
ಲೇಸು ಕಾಂಬುವುದು ಭೀಮೇಶಕೃಷ್ಣಗೆ ಬ್ಯಾಗ ॥೫॥
***
Hari hari ennade I naligi-
Nniruvudyatake summane ||pa||
Sarasijakshana divya sasiranama bittu
Parara vartyelasakti pamaranaguvudyake ||1||
Kallu hittagi rangavali enisuvudu
Kallige kadeyade mallarantakage byaga ||2||
Madhura padarthadalli manasanikkalu byada
Madhuvairi harinama kshudheya bedutaliga ||3||
Arkasutana Baya ankeyilladantire
Sikku sigadantire yukti rakkasantakanallittu ||4||
Isu matyake yasodekusinalapvomdirali
Lesu kambuvudu bimesakrushnage byaga ||5||’
***