Showing posts with label ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ bheemashankara. Show all posts
Showing posts with label ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ bheemashankara. Show all posts

Friday, 6 August 2021

ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ || ವೃಷಭಸ್ವರೂಪದಿ ಮೆರೆವ ಆಕಾರದೇವಗೆ | ವೃಷಭ ಕನ್ನಿಕೆಯರಾರುತಿ ಎತ್ತಿರೆ ವೃಷಭಾಶಿವಗೆ ಸಂಗಮಗ ಜಗದೀಶ ಮಹೇಶ-ಗಾರುತಿಯನೆತ್ತಿರೆ ವೃಷಭ ಶಿವಗೆ ಸಂಗಮಗೆ 1


ಭಾನು ಕೋಟಿ ದಿವ್ಯ ತೇಜ ಪ್ರಕಾಶಗೆ ಆನಂದಮಯಗೆ ಚಿನ್ಮಯಗೆ | ಮಾನಸದಿಂದಲಿಮೆರೆವೆನ್ನ ದೇವಗೆ ಮಾನ ಕನ್ನಿಕೆಯರಾರುತಿ ಎತ್ತಿರೆ |ವೃಷಭ ಶಿವಗೆ ಸಂಗಮಗೆ 2


ಭಾಗೀರಥಿ ಪ್ರಿಯಗೆ ಭಾಲನೇತ್ರಗೆ ಶ್ರೀ ಗೌರಿಯ ಮನೋಹರಗೆ | ನಾಗಭೂಷಣನಾರಾಯಣ ಪ್ರಿಯಗೆ ನಾಗ ಕನ್ನಿಕೆಯರಾರುತಿ ಎತ್ತಿರೆ 3


ದೇವರ ದೇವಗೆ ದೇವ ಜಗದೀಶಗೆ | ದೇವಸನ್ಮೋಹನಸ್ವಾಮಿಗೆ | ದೇವ ಸಿಂಧಾಪುರದ ಶ್ರೀ ವಿಶ್ವನಾಥಗೆದೇವ ಕನ್ನಿಕೆಯರಾರುತಿ ಎತ್ತಿರೆ 4

***