Showing posts with label ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ neleyadikeshava. Show all posts
Showing posts with label ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ neleyadikeshava. Show all posts

Wednesday, 1 September 2021

ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ankita neleyadikeshava

 ..

ಶ್ರೀರಾಮ ಎನ್ನಿರೊ ಮೂಜಗದವರೆಲ್ಲಈರೇಳು ಭುವನ ತನ್ನುದರದೊಳಿಟ್ಟನ ಪ


ಅನಿಮಿಷರಂದದಿ ವನವಾಸಕೆ ಹೋದವನ _ ಶ್ರೀರಾಮ ಎನ್ನಿರೊಮನಸಿಜ ನಾರಿಯ ಪಿತನ ಕೊಂದನ ಪಿತನ ಪೊತ್ತವನ _ ಶ್ರೀರಾಮ ಎನ್ನಿರೊಘನ ಕೋಡ ಕೊನೆಯಿಂದ ಧರಣಿಯ ತಾಳ್ದವನ _ ಶ್ರೀರಾಮ ಎನ್ನಿರೊದಿನಕರನಳಿವಿನಲಿ ಪಗೆಯ ಗೆದ್ದಾತನ _ ಶ್ರೀರಾಮ ಎನ್ನಿರೊ1


ಗಜವನೇರಿದವನ ತಂದೆಯ ತಾಯನಳೆದವನ _ ಶ್ರೀರಾಮ ಎನ್ನಿರೊಭುಜಬಲದಿಂದ ಭೂಪಾಲರ ಗೆದ್ದವನ _ ಶ್ರೀರಾಮ ಎನ್ನಿರೊನಿಜಮುನಿಗಳ ವನದಿಂದ ತನಯರ ತಂದವನ _ ಶ್ರೀರಾಮ ಎನ್ನಿರೊಭುಜಗಧರನ ಕೈಯ ಆಯುಧವನು ತಂದವನ _ ಶ್ರೀರಾಮ ಎನ್ನಿರೊ 2


ಪೆಣನ ಭೋಜನ ಮಾಡಿದವರ ವಾಸವ ಹೊಕ್ಕವನ _ ಶ್ರೀರಾಮ ಎನ್ನಿರೊತೃಣಕೆ ಬಾಯಿತ್ತನ ಮೇಲೇರಿ ಬಪ್ಪನ _ ಶ್ರೀರಾಮ ಎನ್ನಿರೊ ಅಣುರೇಣು ತೃಣದೊಳು ಪರಿಪೂರ್ಣನಾದನ _ ಶ್ರೀರಾಮ ಎನ್ನಿರೊಪ್ರಣವಗೋಚರ ಕಾಗಿನೆಲೆಯಾದಿಕೇಶವನ _ ಶ್ರೀರಾಮ ಎನ್ನಿರೊ 3

***