..
kruti by radhabai
ಅಂದಾರಮ್ಮಾ ಆ ನಾರಿಯರು ನನ್ನಂದಾರಮ್ಮಾ ಪ
ಗೋಪಾಲರೊಡಗೂಡಿ ಗೋವ್ಗಳ ಕಾಯ್ವಾಗ
ಗೋಪಾಲನೆಲ್ಲಾ ಸೂರೆಗೊಂಬುವೆ ನಂತೇ
ಗೋಪೇರ ಮನೆ ಪೊಕ್ಕು ನೆಲುವಿನ ಪಾಲ್ಮೊಸರ
ಕುಡಿದು ಗಡಿಗೆಯ ಒಡೆದು ತೂತು ಮಾಡಿದೆನಂತೆ 1
ನಾರೀಮಣಿಗಳೆಲ್ಲ ನೀರಿಗೆ ಪೋಪಾಗ ದಾರಿಗಡ್ಡವಕಟ್ಟಿ
ಪೋಲು ಮಾಡಿದೆನಂತೆ ಕಳ್ಳಾನು ನಾನಂತೇ ಕಾಮಿನಿಯರ
ಕೆಡೆಸಿದನಂತೇ
ಒಳ್ಳೆ ಬುದ್ದಿ ಇಲ್ಲಾವಂತೇ ಯನ್ನ ಹೋಗ್ಹೋಗಂದರಮ್ಮಾ2
ಮರುಳಾನು ನಾನಂತೆ ಸರಸಿಜಾಕ್ಷಿಯರೆಲ ವರಳಿಗೆ
ಕಟ್ಟಿ ಬರಿದ ಬಾಧಿಸುವರೇ
ಬಲ್ಲೀದ ನಾನಾಂತೆ | ಫುಲ್ಲಾಕ್ಷಿಯರಿಗೆಲ್ಲ ವಲ್ಲಾಭನೆನುತಲಿ
ಸುಳ್ಳಾಡಿ ಕೊಂಬೋರೆ 3
ಸಣ್ಣಾವನಲ್ಲವಂತೆ | ಬಿನ್ನಾಣಗಿತ್ತಿಯರೆಲ್ಲ
ಸೆಳಕೊಂಡ್ಹೋಗಿ ಬಿಗಿದಪ್ಪಿ ಕೊಂಬೋರೆ
ಮುದ್ದು ಮಾಡಿದಿಯಂತೆ ಬುದ್ಧಿ ಕಲಿಸಲಿಲ್ಲವಂತೆ
ಮೊಸರು ಬೆಣ್ಣೆಗಳನು ಮೆದ್ದು ಓಡುವೆನಂತೆ 4
ಶಶಿಮುಖಿಯರೆಲ್ಲ ಹಸುಗೂಸು ಎನ್ನ ಮೇಲೆ
ಪುಸಿಮಾತು ಪೇಳೋರು ಕೇಳ ಬೇಡವೆ ತಾಯಿ
ಇಂದುವದನೇರ ಕಾಟಾ ತಡೆಯಲಾರದೆ ದೊಡ್ಡ
ಮಡುವನ್ನಾದರು ಪೋಗಿ ಧುಮುಕುವೆನೇ ತಾಯೆ 5
***