Showing posts with label ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು indiresha AARUTI BELAGUVENU MAAHAVAGAARUTI BELAGUVENU. Show all posts
Showing posts with label ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು indiresha AARUTI BELAGUVENU MAAHAVAGAARUTI BELAGUVENU. Show all posts

Saturday, 4 December 2021

ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ankita indiresha AARUTI BELAGUVENU MAAHAVAGAARUTI BELAGUVENU



ಆರುತಿ ಬೆಳಗುವೆನು 
ಮಾಧವಗಾರುತಿ ಬೆಳಗುವೆನು ||ಪ||

ಆರುತಿ ಬೆಳಗುವೆ ಮಾರುತಿ ಪ್ರಿಯ 
ಯದು ಕೀರುತಿಕರ ಪಾರ್ಥಸಾರಥಿ ಹರಿಗೆ ||ಅ.ಪ|| 

ನೀರೊಳು ಪೊಕ್ಕವಗೆ 
ಕಡಲೊಳು ಭಾರವ ಪೊತ್ತವಗೆ
ಮೂರು ಪಾದದಿ ಸರ್ವಧಾರುಣಿ 
ಅಳೆಯುತ ಧೀರ ಬಲಿಯ ಮನೆ 
ದ್ವಾರ ಕಾಯ್ದವಗೆ ||೧|| 

ಕ್ಷತ್ರಿಯರ ಗೆಲಿದವಗೆ 
ಗಾರ್ಜಿತ ಸತ್ರವ ಕಾಯ್ದವಗೆ
ಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದ
ಬತ್ತಲೆ ಕುದುರಿಯ ಹತ್ತಿ ಮೆರೆದವಗೆ ||೨||

ಸೃಷ್ಟಿಯು ಇಲ್ಲದವಗೆ 
ಜಗವನು ಸೃಷ್ಟಿ ಪಾಲಿಪಗೆ
ಬೆಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ
ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ ||೩|| 

ನಂದಗೋಕುಲದಲ್ಲಿ ಬೆಳೆಯುವ 
ಮಂದಜಾಕ್ಷಿಯರಲ್ಲೆ
ಒಂದೊಂದು ಆಟಗಳಾಡಿ ಸುಖವನಿತ್ತ
ನಂದ ಬಾಲಕನಾದ ಇಂದಿರೇಶನಿಗೆ ||೪||
***


Aruti belaguvenu 
madhavagaruti belaguvenu ||pa||

Aruti belaguve maruti priya 
yadu kirutikara parthasarathi harige ||a.pa|| 

Nirolu pokkavage 
kadalolu bharava pottavage
muru padadi sarvadharuni 
aleyuta dhira baliya mane 
dvara kaydavage ||1|| 

Kshatriyara gelidavage 
garjita satrava kaydavage
satya rukmini mukhya patniyaralida
battale kuduriya hatti meredavage ||2||

Srustiyu illadavage 
jagavanu srusti palipage
bettilindale giri bettanettida
bhista nidalu sukha pushpavanditage ||3|| 

Nandagokuladalli beleyuva 
mandajakshiyaralle
ondondu atagaladi sukhavanitta
nanda balakanada indireshanige ||4||

***

ಆರುತಿ ಬೆಳಗುವೆನು ಮಾಧವಗಾರುತಿ ಬೆಳಗುವೆನು ಪ

ಆರುತಿ ಬೆಳಗುವೆ ಮಾರುತಿ ಪ್ರಿಯ ಯದು-ಕೀರುತಿಕರ ಪಾರ್ಥಸಾರಥಿ ಹರಿಗೆ ಅ.ಪ.

ನೀರೊಳು ಪೊಕ್ಕವಗೆ ಕಡಲೊಳು ಭಾರವ ಪೊತ್ತವಗೆಮೂರು ಪಾದದಿ ಸರ್ವಧಾರುಣಿ ಅಳೆಯುತಧೀರ ಬಲಿಯ ಮನೆ ದ್ವಾರ ಕಾಯ್ದವಗೆ 1

ಕ್ಷತ್ರಿಯರ ಗೆಲಿದವಗೆ ಗಾರ್ಜಿತ ಸತ್ರವ ಕಾಯ್ದವಗೆಸತ್ಯ ರುಕ್ಮಿಣಿ ಮುಖ್ಯ ಪತ್ನಿಯರಾಳಿದಬತ್ತಲೆ ಕುದುರಿಯ ಹತ್ತಿ ಮೆರೆದವಗೆ 2

ಸೃಷ್ಟಿಯು ಇಲ್ಲದವಗೆ ಜಗವನು ಸೃಷ್ಟಿ ಪಾಲಿಪಗೆಬಟ್ಟಿಲಿಂದಲೇ ಗಿರಿ ಬೆಟ್ಟನೆತ್ತಿದ-ಭೀಷ್ಟ ನೀಡಲು ಸುಖ ಪುಷ್ಪವಂದಿತಗೆ 3

ನಂದಗೋಕುಲದಲ್ಲೆ ಬೆಳೆಯುವ ಮಂದಜಾಕ್ಷಿಯರಲ್ಲೆಒಂದೊಂದು ಆಟಗಳಾಡಿ ಸುಖವನಿತ್ತನಂದ ಬಾಲಕನಾದ ಇಂದಿರೇಶನಿಗೆ4
***