Showing posts with label ಏನೆಂದು ಪೇಳಲೋ ರಾಮ ನಿನ್ನಾ ದೀನವತ್ಸಲತೆಯ ಆಶ್ರಿತ ಪ್ರೇಮ lakshmikanta. Show all posts
Showing posts with label ಏನೆಂದು ಪೇಳಲೋ ರಾಮ ನಿನ್ನಾ ದೀನವತ್ಸಲತೆಯ ಆಶ್ರಿತ ಪ್ರೇಮ lakshmikanta. Show all posts

Sunday, 1 August 2021

ಏನೆಂದು ಪೇಳಲೋ ರಾಮ ನಿನ್ನಾ ದೀನವತ್ಸಲತೆಯ ಆಶ್ರಿತ ಪ್ರೇಮ ankita lakshmikanta

 ..


kruti by ಲಕ್ಷ್ಮೀನಾರಯಣರಾಯರು Lakshminarayanaru 


ಏನೆಂದು ಪೇಳಲೋ ರಾಮ ನಿನ್ನಾ

ದೀನವತ್ಸಲತೆಯ ಆಶ್ರಿತ ಪ್ರೇಮ ಪ


ಕಲ್ಲಾಗಿ ಪಥದಲ್ಲಿ ಬಿದ್ದ | ಮುನಿ

ವಲ್ಲಭೆಯನು ಸಲಹಿದ ಸುಪ್ರಸಿದ್ಧ

ಕಲ್ಲೆದೆಯವ ನಾನು ಸಿದ್ಧ | ಎನ್ನ

ಸೊಲ್ಲುಲಾಲಿಸಿ ಪೊರೆಯಯ್ಯ ಅನಿರುದ್ಧ 1


ಪಶುಜಾತಿ ಸುಗ್ರೀವ ಮುಖರ | ನೀ

ಹಸನಾಗಿ ಪೊರೆದದ್ದು ಕೇಳಿದೆ ವಿವರ

ವಶವಲ್ಲದಿಂದ್ರಿಯನಿಕರವುಳ್ಳ

ಪಶುಪ್ರಾಯ ನಾನಯ್ಯ ರಕ್ಷಿಸೋ ಚತುರ 2


ಚೆಂಡಾಲನಾದ ಗುಹನ | ಕೈ

ಗೊಂಡು ಕಾಪಾಡಿದೆ ಕುರುಣದಿಂದವನ

ಖಂಡಿತ ಪೇಳುವೆ ಘನ್ನ | ಕರ್ಮ

ಚೆಂಡಾಲ ನಾನು ಶ್ರೀ ಕಾಂತ ಪ್ರಸನ್ನ 3

***