Showing posts with label ವಾಣಿಯೆ ಬ್ರಹ್ಮನ ರಾಣಿಯೆ ನಿನ್ನ ಪಾದ prananatha vittala. Show all posts
Showing posts with label ವಾಣಿಯೆ ಬ್ರಹ್ಮನ ರಾಣಿಯೆ ನಿನ್ನ ಪಾದ prananatha vittala. Show all posts

Thursday, 5 August 2021

ವಾಣಿಯೆ ಬ್ರಹ್ಮನ ರಾಣಿಯೆ ನಿನ್ನ ಪಾದ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ವಾಣಿಯೆ ಬ್ರಹ್ಮನ ರಾಣಿಯೆ ನಿನ್ನ ಪಾದ

ಕಾಣದೆ ನಿಲ್ಲಲಾರೆ ಕಾಮಿನಿಯೆ ಪ


ದೇವಿಯೆ ಎನ್ನನು ಕಾವೆಯೆಂದೆನುತಲಿ ಭಾವಿಸಿ

ನಿನ್ನನು ಬಯಸಿದೆನೆ

ಭಾವವ ತಿಳಿದ್ಯೆನ್ನ ಕಾಯೆ ಕಮಲಮುಖಿ ಕಾಣದೆ

ನಿಲ್ಲಲಾರೆ ಕಾಮಿನಿಯೆ 1


ಅಜನ ರಾಣಿಯೆ ನಿನ್ನ ನಿಜಭಕುತಿಯೊಳು

ನಾಭಜಿಸುವೆನಮ್ಮ ಭುಜಗ ವೇಣಿ

ತ್ರಿಜಗವಂದಿತೆ ನಿನ್ನನಿಜ ಪದ ಕಮಲವ ಕಾಣದೆ

ನಿಲ್ಲಲಾರೆ ಕಾಮಿನಿಯೆ 2


ವಾಸವಮುಖ ಸುರೇಶರು ನಿನ್ನನು ಅಶಿಸುತಿರುವರೆ

ಭಾಸುರಾಂಗಿ

ಬೇಸರಿಸದೆನೀ ಶೇಷವಿಠಲನ ತೋರೆ ಕಾಣದೆ

ನಿಲ್ಲಲಾರೆ ಕಾಮಿನಿಯೆ 3

***