Showing posts with label ಭೋಕ್ತಸದ್ಗೈಸೋ ಅವಧೂತ mahipati. Show all posts
Showing posts with label ಭೋಕ್ತಸದ್ಗೈಸೋ ಅವಧೂತ mahipati. Show all posts

Wednesday, 1 September 2021

ಭೋಕ್ತಸದ್ಗೈಸೋ ಅವಧೂತ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಭೋಕ್ತಸದ್ಗೈಸೋ ಅವಧೂತ ಪ  


ಅನುಭವ ಬೀರೋ ನಿಧಾನ ಅನುದಿನ ಕಾಯೋ ಕರುಣ 1 

ಅತಿಹರುಷದಲಿಡೋ ತಂದೆ ಸುಖದಾಯಕ ನೀನೆಂದೆ 2 

ಅರುಹು ಕುರುಹು ಆಗುವ ಮನೆಮೂರ್ತಿದೋರೋ ಶ್ರೀಗುರುವರಮೂರ್ತಿ ನಿಮ್ಮ ಕೀರ್ತಿ 3 

ಹಿಡಿಯಲವನಿವನೆಂದು ಸುಗುಣ ನೋಡದಿರೆನ್ನವಗುಣ ಮಾಡಲಿಕ್ಕೆನ್ನ ಪುನೀತನ ಒಡಯನಹುದೋ ನೀ ಪೂರ್ಣ 4 

ಬಾಲಕ ನಿಜ ನಿಮ್ಮಿಂದ ಮಹಿಪತಿಯ ಪಾಲಿಸಬೇಕು ಸುದಯಾ ಸಲಹೊ ಸದ್ಗುರು ನಮ್ಮಯ್ಯ 5

***