Showing posts with label ಕರವ ಪಿಡಿದು ಕಾಯೊ ಎನ್ನಾ ಶ್ರೀ ಯತಿವರ gurujagannatha vittala KARAVA PIDIDU KAAYO ENNA SRI YATIVARA. Show all posts
Showing posts with label ಕರವ ಪಿಡಿದು ಕಾಯೊ ಎನ್ನಾ ಶ್ರೀ ಯತಿವರ gurujagannatha vittala KARAVA PIDIDU KAAYO ENNA SRI YATIVARA. Show all posts

Thursday, 2 December 2021

ಕರವ ಪಿಡಿದು ಕಾಯೊ ಎನ್ನಾ ಶ್ರೀ ಯತಿವರ ankita gurujagannatha vittala KARAVA PIDIDU KAAYO ENNA SRI YATIVARA


ಕರವಪಿಡಿದು ಕಾಯೊ ಎನ್ನಾ

ಶ್ರೀ ಯತಿವರ ಗುರುರಾಘವೇಂದ್ರರನ್ನಾ ಪ


ಶರಣ-ಜನ-ಸುರ-ಪಾದಪನೆ ತವ

ಚರಣಯುಗಳತೆ ಮೊರೆಯ ಪೊಕ್ಕೆನೊ

ಕರುಣಿಸೆನ್ನನು ದೂರ ನೋಡದೆ

ಕರುಣಸಾಗರನೆ ನೀ ಅ.ಪ


ಆರು ಕಾಯ್ವರೊ ಪೇಳೋ ಎನ್ನ - ನೀ

ದೂರ ನೋಡುವದೇನು ಘನ್ನ

ಸಾರಿದವರಿಗಿಷ್ಟವನ್ನ - ಬೀರುವನೆಂಬೋ

ಬಿರುದು ಪೋಗಿಹದೋ ನಿನ್ನ

ಸಾರುವೆನೊ ತವ ಪಾದ - ಪದುಮ

ಸೌರಭ ಸ್ವೀಕರಿಪ ಜನರೊಳು

ಸೇರಿಸೆನ್ನನು ದೂರ ನೋಡದೆ

ಭೂರಿ ಕರುಣಾಕರನೆ ನೀ 1


ದುರುಳು ಭವಾಂಬುಧಿ ಬಾಧಾ - ಎನ್ನ

ಮೀರಿ ಪೋಗಿಹÀ್ಯದು ಅಗಾಧಾ

ಘೋರ ಮದನ - ಶರ - ಬಂಧಾ - ದಿಂದ

ದೂರಾಗಿಹದೋ ನಿನ್ನ ಸಂಭಂಧ

ಪರಮ ಪಾಮರನಾದ ಎನ್ನಯ

ಮರುಳು ಮತಿಯನು ಬಿಡಿಸಿ ನಿನ್ನ -

ವರೊಡನೆ ಸೇರಿಸೊ ಪರಮ ಕರುಣಿಯೆ

ಚಾರತರನಾದ ಎನ್ನಾ 2


ದುಷ್ಟಜನರ ಸಂಗದಿಂದ ನಿನ್ನಯ ಪಾದ

ಮುಟ್ಟ ಭಜಿಸದರಿಂದ

ಸೃಷ್ಟಿಯೊಳಗೆ ಮತಿಮಂದಾ ನಾಗೀ

ಪುಟ್ಟಿ ಬಂದೆನೊ ವೇಗದಿಂದಾ

ಕಷ್ಟಹರ ಗುರು ಜಗನ್ನಾಥ

ವಿಠಲನ ನಿಜ ಪಾದ ಪದುಮಕೆ

ಘಟ್ಟದೋಪಮ ನೆನಿಸಿ ಎನ್ನಾ

ಪುಟ್ಟಿ ಬರದಂತೆ ಮಾಡೊ ನೀ 3

***