Showing posts with label ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ purandara vittala. Show all posts
Showing posts with label ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ purandara vittala. Show all posts

Saturday, 7 December 2019

ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ purandara vittala

ಪುರಂದರದಾಸರು
ರಾಗ ಕಾಂಭೋಜ. ಝಂಪೆ ತಾಳ

ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ ||ಪ||
ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ ||ಅ||

ಐದು ಮುಖ ಮತ್ತೆ ಮೂರೈದು ಕಣ್ಣುಗಳಿಂದ
ಐದು ಮುಖದೊಳಗ್ನಿಕಿಡಿ ಉದುರಿಸಿ
ಐದೆರಡು ತೋಳುಗಳ ನೀಡಿ ಒಲಿದಾಡಿಸುತ
ಐದುಬಾಣನ ಗೆದ್ದ ಗುಮ್ಮ ಬಂದಿದಕೋ ||

ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದ
ಮೇಲೆ ಹೆಣಗಳ ಚುಚ್ಚಿ ಒಲಿದಾಡುತ
ಕಾಲಭೈರವನ ಕಾವಲನಿರಿಸಿ ಮರುಳುಗಳ
ಓಲಗದಿ ತಲೆಬಾಗಿಲಲಿ ಬಂದನಿದಕೋ ||

ಮುದಿ ಎತ್ತನೇರಿ ಮೈಯೊಳು ಬೂದಿಯನು ಪೂಸಿ
ಮದನಾರಿಯೆಂಬಂಥ ಬಲು ಭೂತವು
ಹೃದಯದಲಿ ನಿನ್ನ ನೋಡುವೆನೆಂಬ ಧ್ಯಾನದಲಿ
ಒದಗಿ ಬಂದೈದಾನೆ ಪುರಂದರವಿಠಲ ||
***

pallavi

summaniru summaniru bEDi kombe

anupallavi

I mahiyoLatishayada gumma bandidekO

caraNam 1

aidu mukha matte mUraidu kaNNugaLinda aidu mukhadoLagagni kiDi udurisi
aideraDu tOLugaLa nIDi olidADisuta aidu bANana gedda gumma bandidekO

caraNam 2

bAlacandrana pottu koNDu trishulada mEle heNagaLa kacci olidAtuda
kAlabhairavana kAvalanirisi maruLugaLa Olagadi tale bAgilali bandanidakO

caraNam 3

mudi ettanEri maiyoLu bUdiyanu pUsi madanAriyembanda balu bhUtavu
hrdayadali ninna nODuvenemba dhyAnadali odagi bandaidAne purandara viTTala
***

ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪ

ಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1

ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2

ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3

ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4

ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
********