,,
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಮರೆಯ ಮಾಡುವರೆ ರಂಗಯ್ಯ ತೆರೆಯ ಹಾಕುವರೆ
ವರದನು ಜಗಕೆಂದು ಎನಿಸಿದ ಬಳಿಕ ಪ
ಕುರುಹ ನಾನರಿಯೆ ನಿನ್ನಯ ರಂಗಯ್ಯ ಸುರತವ ಬಲ್ಲೆ
ಗುರುತು ಬಲ್ಲವಗೆ ಈ ಪರಿ ಮಾಡಿ ತೋರಿದೆ 1
ಗುರುತುಯೆಂದರಿಯಾ ಸರ್ವದಾ ಎನ್ನ ದೊರೆಯು ನೀನಲ್ಲೆ
ತೆರೆಯು ನಿನ್ನದು ಲೋಕ ಪರಿಪಂಥಿಯಾಹುದೆ 2
ದುರಿತವು ಮೊದಲೆ ಪೋದವು ವಾಸುದೇವವಿಠಲನೆ
ಪೊರೆಯೊ ದಯವು ನಿನ್ನ ಸಹಜ ಪೋಗುವುದೇ 3
***