Showing posts with label ಅಂಬುಜ ಮುಖಿಯರು ಕಂಬುಕಂಠೆಯರು prananatha vittala. Show all posts
Showing posts with label ಅಂಬುಜ ಮುಖಿಯರು ಕಂಬುಕಂಠೆಯರು prananatha vittala. Show all posts

Thursday, 5 August 2021

ಅಂಬುಜ ಮುಖಿಯರು ಕಂಬುಕಂಠೆಯರು ankita prananatha vittala

 ....

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಅಂಬುಜ ಮುಖಿಯರು ಕಂಬುಕಂಠೆಯರು

ಅಂಬರದಲಿ ನಾಟ್ಯವಾಡಿದರು ಪ


ಕುಂಭಿಣಿ ಪತಿ ಶ್ರೀ ಕೃಷ್ಣನರಥ ಬರೆ

ಸಂಭ್ರಮದಿಂದಲಿ ಪಾಡಿದರು ಅ.ಪ.


ಬಾಜ ಬಜಂತ್ರಿಯ ವಾದ್ಯರಭಸದೊಳು

ಮೋಜಿನಿಂದಲಿ ಹರಿ ಬರುತಿರಲು

ಸೋಜಿಗ ಪಡುತಲಿ ರಾಜ ವದನೆಯರು

ಜಾಜಿಮಲ್ಲಿಗೆ ಹೂವ ಬೀರಿದರು 1


ವೇದ ಘೋಷಗಳಿಂದ ಮೋದಪಡುತ ಹರಿ

ಸಾಧುಜನರ ಕೂಡಿ ಸರಸದಲಿ

ಬೀದಿಯೊಳ್ ಬರುತಿರೆ ಮಾಧವರಾಯಗೆ

ಸೂಜಿಮಲ್ಲಿಗೆ ಹೂವ ಬೀರಿದರು 2


ಕನ್ನಡಿ ಮಂಟಪ ಮಧ್ಯದೊಳಗೆ ಹರಿ

ರನ್ನೆಯರೊಡಗೊಡಿ ಬರುತಿರಲು

ಸನ್ನುತಾಂಗ ಶಿರಿ ಪ್ರಾಣನಾಥ ವಿಠಲನ

ಸಂಭ್ರಮದಿಂದಲಿ ಸಾರಿದರು 3

***