Showing posts with label ಪವಿತ್ರ ಉತ್ಸವವನ್ನು ನೋಡುವ ಪವಿತ್ರೋತ್ಸವ ಗೀತೆ venkatakrishna. Show all posts
Showing posts with label ಪವಿತ್ರ ಉತ್ಸವವನ್ನು ನೋಡುವ ಪವಿತ್ರೋತ್ಸವ ಗೀತೆ venkatakrishna. Show all posts

Tuesday, 1 June 2021

ಪವಿತ್ರ ಉತ್ಸವವನ್ನು ನೋಡುವ ಪವಿತ್ರೋತ್ಸವ ಗೀತೆ ankita venkatakrishna

by yadugiriyamma 

 ಪವಿತ್ರೋತ್ಸವ ಗೀತೆ

ಪವಿತ್ರ ಉತ್ಸವವನ್ನು ನೋಡುವ ಬನ್ನಿ ಭಕ್ತರೆಲ್ಲಾ ಪ

ವರಶುಕ್ಲಪಕ್ಷದ ಏಕಾದಶಿಯಲಿ ಅನೇಕಾ

ಭರಣವ ಬಿಟ್ಟು ರಂಗ ವೈದೀಕನಂತೆ

ಪೊರಟು ವೈಜಯಂತಿ ಜನಿವಾರ ಕೌಸ್ತುಭಮಣಿಯು

ಕೊರಳೊಳು ಹೊಳೆಯೆ ಓಲ್ಯಾಡುತಲೆ

ಅರಳಿದಪುಷ್ಪದ ಮೇಲೆ ಯಾಗಶಾಲೆಗೆ ಬಂದರಂಗನ 1

ವೇದಘೋಷಗಳನ್ನು ವಿಪ್ರರು ಮೋದದಿಂ ಮಾಡುತಿರಲು

ವೇದಮೂರುತಿ ರಂಗನಾಥಗೆ ಆ

ರಾಧನೆ ಮಾಡಿ ಮುನ್ನೂರುಅರವತ್ತು ಪೂಜೆಯನು ಮಾಡಿ

ಮುದ್ದುರಂಗನಿಗೆ ಮಜ್ಜನವ ಮಾಡಿ

ನಿಂದು ಹರುಷದಿ ಯಾಗಪೂರ್ತಿಯ ಮಾಡಿದ ರಂಗನ 2

ತಂದ ತಂಡುಲವರವಿಯೆ ಮಧ್ಯದಿ ಭಾಂಡಗಳ

ತಂದಿರಿಸಿ ತಂಬಿ ಪವಿತ್ರವನು ಕಲ್ಪೋಕ್ತದಿಂದ ಪ್ರತಿಷ್ಠೆ ಮಾಡಿ

ಒಂದು ಪವಿತ್ರವನು ಪ್ರದಕ್ಷಿಣೆಯಿಂದ

ತಂದು ಧರಿಸಿ ಚಂದದಿಂ ವೈಯ್ಯಾರ ನಡೆ

ಯಿಂದ ಮಂದಿರಕೆ ನಡೆತಂದ ರಂಗನ 3

ದ್ವಾದಶಿ ದಿವಸದಲಿ ಶ್ರೀರಂಗನ ಪೊಗಳೆ

ವೇದಪಾಠಕರು ಅನಾದಿಮೂರುತಿ ರಂಗನಾಥಗೆ ಆ

ರಾಧನೆ ಮಾಡಿ ಮುನ್ನೂರು ಅರವತ್ತು ಮಂಗಳಾರತಿ ಮು

ಕ್ತಿದಾಯಕಗೆತ್ತಿ ಪೂಜೆಗೊಂಡು ಪವಿತ್ರವನು ಧರಿಸಿ ವಿ

ನೋದ ಸೇವೆಯ ತೋರಿದ ರಂಗನ 4

ಸಂಧ್ಯಾರಾಗದಿ ಇಂದಿರಾಪತಿ ಬಂದು ಮಂಟಪದಲಿ

ಚಂದದಿಂದಲೆ ಪೂಜೆ ನೈವೇದ್ಯವ ಆ

ನಂದದಿಂದ ಗ್ರಹಿಸಿ ದಿಂಧಿಮಿತೆಂಬ ವಾದ್ಯದಿ ಗೋ

ವಿಂದ ತಾನೆ ಪೊರಟು ಚಂದದಿಂದ ಶಾರ್ದೂಲನಡೆ

ಯಿಂದ ಮಂದಹಾಸದಿ ಬಂದ ರಂಗನ 5

ಸಪ್ತದಿವಸದಿ ಪವಿತ್ರದಾಭರಣವಿಟ್ಟು

ಭಕ್ತವತ್ಸಲ ಕರ್ಪೂರದ ಚೂರ್ಣಾಭಿಷೇಕವ

ಅರ್ಥಿಯಿಂದ ಗ್ರಹಿಸಿ ಪತ್ನಿಯರು ಸಹಜವಾಗಿ

ಭತ್ತದಕೊಟ್ಟಿಗೆ ಎದುರೆ ಭತ್ತವಳಿಸಿಯೆ ನಿಂತ

ಭಕ್ತವತ್ಸಲ ಮಿತ್ರರಎದುರಲಿ ನಿಂದ ರಂಗನ 6

ಒಂಭತ್ತು ದಿನದಲಿ ಅಂಬುಜನಾಭ ಆನಂದ

ದಾಭರಣವಿಟ್ಟು ಕುಂದಣದ ಕೋಳಿಕೆಯನೇರಿ

[ತುಂಬು ಚೆಲ್ವನಾ] ಚಂದ್ರಪುಷ್ಕರಿಣಿಯಲಿ

ಶುಭ್ರತೀರ್ಥವ ಆನಂದದಿಂದಲಿತ್ತು ಬಂದು

ಅವಭೃತ ಮಾಡಿಯೆನಿಂದ ಶ್ರೀನಿವಾಸರಂಗನ 7

ಉತ್ಸವದ ಮರುದಿನದಿ ಶ್ರೀರಂಗನು ತನ್ನ ಏಕಾಂತ

ಭಕ್ತರಿಗೆ ಇತ್ತು ಪವಿತ್ರದಾಭರಣ ತೀರ್ಥಪ್ರಸಾದವನ್ನು

ಮುಕ್ತಿದಾಯಕ ಮುನಿಗಳ ಮುಂದೆ ಚಂದ್ರನಂತೆ ಬ

ರುತ್ತಿರಲು ಸುತ್ತ ತಾರಕೆಯಂತೆ ವೈಷ್ಣವರು

ಒತ್ತಿ ಬರುವ ಅಂದಚಂದದ 8

****